2026-06-08 01:25:31

Television actress Subhashini Balasubrahmanyam found hanging | ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ ಶವ ಪತ್ತೆ | Speed News Kannada

Television actress Subhashini Balasubrahmanyam found hanging | ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ ಶವ ಪತ್ತೆ | Speed News Kannada

ತಮಿಳು ಕಿರುತೆರೆಯಲ್ಲಿ ಪೋಷಕ ನಟಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಸುಭಾಷಿಣಿ ಬಾಲಸುಬ್ರಹ್ಮಣ್ಯಂ (36) ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆಗಳ ಪ್ರಕಾರ, 'ಸುಭಾಷಿಣಿ ಅವರು ಮಾರ್ಚ್ 3ರಂದು ಶೂಟಿಂಗ್ ನಿಮಿತ್ತ ಚೆನ್ನೈಗೆ ಬಂದಿದ್ದರು. ಏಪ್ರಿಲ್ 5ರ ರಾತ್ರಿ ತಮ್ಮ ಪತಿ ಬಿಪಿನ್ ಚಂದ್ರನ್ ಅವರೊಂದಿಗೆ ವಿಡಿಯೊ ಕರೆಯಲ್ಲಿ ಮಾತನಾಡಿದ್ದು, ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು. ಇದಾದ ಬಳಿಕ ವಿಡಿಯೊ ಕರೆಯಲ್ಲಿ ಇದ್ದಾಗಲೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.ಧಾ ಬ್ರಹ್ಮಗಂಟು ಧಾರಾವಾಹಿ: ದಿಶಾ ಆದ ದೀಪಾ, ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಸೌಂದರ್ಯ ಅಣ್ಣಯ್ಯ ಧಾರಾವಾಹಿ: ಮಾಸ್ತಿಕೊಪ್ಪಲ ಕುಟುಂಬಸ್ಥರ ಸವಾಲು ಸ್ವೀಕರಿಸಿದ ರಾಣಿ ನಟಿಯ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಅವರ ಅನೇಕ ಸಹ ಕಲಾವಿದರು ಸಾಮಾಜಿಕ ಮಾಧ್ಯಮದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ. ಶ್ರೀಲಂಕಾ ಮೂಲದ ಸುಭಾಷಿಣಿ, ನಟನೆಗೆ ಪ್ರವೇಶಿಸುವ ಮೊದಲು ಚಾನೆಲ್‌ವೊಂದರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ತಮಿಳು ಕಿರುತೆರೆಯಲ್ಲಿ ನಟಿಯಾಗಿ ಮಿಂಚಿದರು. ಧಾರಾವಾಹಿಗಳಷ್ಟೇ ಅಲ್ಲದೇ 'ಇನಿ ಅವನ್', 'ಎಲ್ಲಮ್ ಮೇಲಾ ಇರುಕುರವನ್ ಪಾತಪ್ಪನ್' ಸಿನಿಮಾಗಳಲ್ಲಿಯೂ ನಟಿಸಿದ್ದರು..

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.