ಟೆಹ್ರಾನ್: ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಸಾರಿರುವ ಯುದ್ಧದಲ್ಲಿ ಇರಾನ್ ಟೆಹ್ರಾನ್ ಪ್ರಾಂತ್ಯದಲ್ಲಿ ಈವರೆಗೆ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮಾಹಿತಿಯನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.
ಇರಾನ್ ಟೆಹ್ರಾನ್ ಪ್ರಾಂತ್ಯದ ತುರ್ತು ವೈದ್ಯಕೀಯ ಸೇವೆಗಳ (EMS) ಮುಖ್ಯಸ್ಥ ಮುಹಮ್ಮದ್ ಇಸ್ಮಾಯಿಲ್ ತವಕೋಲಿ ಅವರನ್ನು ಉಲ್ಲೇಖಿಸಿ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿರುವಂತೆ, ಯುದ್ಧ ಆರಂಭವಾದ ಬಳಿಕ ಈ ಪ್ರಾಂತ್ಯದಲ್ಲಿ ಒಟ್ಟು 503 ಮಂದಿ ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ.
ಫೆ.28ರಿಂದ ಈವರೆಗೆ ಟೆಹ್ರಾನ್ ಪ್ರಾಂತ್ಯದಲ್ಲಿ ಸುಮಾರು 5,700 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಳಿಗಳ ಪರಿಣಾಮವಾಗಿ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಭಾರೀ ಹಾನಿ ಉಂಟಾಗಿದೆ. ರಕ್ಷಣಾ ಮತ್ತು ವೈದ್ಯಕೀಯ ಸೇವೆಗಳು ತೀವ್ರ ಒತ್ತಡಕ್ಕೆ ಒಳಗಾಗಿವೆ. ಪರಿಸ್ಥಿತಿ ಉದ್ವಿಗ್ನವಾಗಿಯೇ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.