2026-06-08 03:55:22

Team India entered the finals | ಫೈನಲ್‌ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ.. ಸೆಮಿಸ್‌ನಲ್ಲಿ ಆಲ್‌ರೌಂಡರ್ ಹೊಡೆತಕ್ಕೆ ಮಣಿದ ಲಂಕಾ ಪಡೆ | Speed News Kannada

Team India entered the finals | ಫೈನಲ್‌ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ.. ಸೆಮಿಸ್‌ನಲ್ಲಿ ಆಲ್‌ರೌಂಡರ್ ಹೊಡೆತಕ್ಕೆ ಮಣಿದ ಲಂಕಾ ಪಡೆ | Speed News Kannada

ಎಸಿಸಿ ವುಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಸೆಮಿಫೈನಲ್ ಒಂದರ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ರಾಧಾ ಯಾದವ್ (Radha Yadav) ಸಾರಥ್ಯದ ಭಾರತ ಎ ಮಹಿಳಾ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ. ನಾಯಕಿ ರಾಧಾ ಯಾದವ್ ಅವರ ಆಲ್‌ರೌಂಡರ್ ಪ್ರದರ್ಶನದಿಂದ ಶ್ರೀಲಂಕಾ ನೀಡಿದ್ದ ಸುಲಭಗುರಿಯನ್ನು ಬೇಗನೇ ತಲುಪಿ ಭಾರತ ಗೆಲುವು ಪಡೆಯಿತು. ಬ್ಯಾಂಕಾಕ್‌ ರ್ಟೆ ಕ್ರಿಕೆಟ್ ಗೌಂಡ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಎ ಮಹಿಳಾ ತಂಡ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿತು. ಶ್ರೀಲಂಕಾ ಪರ ಓಪನರ್ ಸಂಜನಾ ಕವಿಂದಿ 31, ಹನ್ಸಿಮಾ ಕರುಣರತ್ನ 14, ಸತ್ಯ ಸಂದೀಪನಿ 15, ಶಶಿನಿ ಗಿಮ್ಮಾನಿ 22 ರನ್‌ಗಳಿಸಿದ್ದು ಬಿಟ್ರೆ, ಉಳಿದವರು ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟರು.
ಟೀಮ್ ಇಂಡಿಯಾ ಪರ ಬಿರುಸಿನ ಬೌಲಿಂಗ್ ಮಾಡಿದ ರಾಧಾ ಯಾದವ್ ಅವರು, ಶ್ರೀಲಂಕಾದ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ರಾಧಾ ಯಾದವ್ ಬೌಲಿಂಗ್ ಅನ್ನು ಎದುರಿಸಲು ಲಂಕಾದ ಯುವತಿಯರಿಗೆ ಆಗಲೇ ಇಲ್ಲ. ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಹೀಗಾಗಿ ಶ್ರೀಲಂಕಾ ಟೀಮ್ 19.4 ಓವರ್‌ಗಳಲ್ಲಿ ಆಲೌಟ್ ಆಗುವ ಮೂಲಕ 119 ರನ್‌ಗಳ ಸಾಧಾರಣ ಮೊತ್ತವನ್ನು ಟೀಮ್ ಇಂಡಿಯಾಗೆ ನೀಡಿತು.
ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಓಪನಿಂಗ್ ಪಡೆದುಕೊಂಡಿತು. ವೃಂದಾ ದಿನೇಶ್ ಕೇವಲ 20 ಬಾಲ್‌ಗಳಲ್ಲಿ 8 ಬೌಂಡರಿ ಸಮೇತ 42 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು. ನಂದಿನಿ ಕಶ್ಯಪ್ 13 ಹಾಗೂ ಅನುಷ್ಕಾ ಶರ್ಮಾ 27 ರನ್ ಗಳಿಸಿದರು. ಆದರೆ ತಂಡ ಗೆಲುವಿನ ಹಂತದಲ್ಲಿ ಸಂಕಷ್ಟದಲ್ಲಿರುವಾಗ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ರಾಧಾ ಯಾದವ್ ಅಜೇಯ 31 ರನ್ ಬಾರಿಸೋ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. 13.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ಭಾರತ 119 ರನ್ ಗಳಿಸಿ ವಿಜಯ ಸಾಧಿಸಿತು. ಕನ್ನಡಿಗರಿಗೆ ಗುಡ್‌ ನ್ಯೂಸ್.. ಕರ್ನಾಟಕ ತಂಡದ ರಣಜಿ ಟ್ರೋಫಿ ಫೈನಲ್ ಮ್ಯಾಚ್ ಈ ಜಿಲ್ಲೆಯಲ್ಲಿ ನಡೆಯುತ್ತೆ, KL ರಾಹುಲ್ ನೋಡುವ ಚಾನ್ಸ್!

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.