2026-06-08 04:56:02

tamilnadu; who support vijay to form government? |ತಮಿಳುನಾಡು: ಸರ್ಕಾರ ರಚನೆಗೆ ವಿಜಯ್‌ ಬೆಂಬಲಿಸುವವರು ಯಾರು? |Speed News Kannada

tamilnadu; who support vijay to form government? |ತಮಿಳುನಾಡು: ಸರ್ಕಾರ ರಚನೆಗೆ ವಿಜಯ್‌ ಬೆಂಬಲಿಸುವವರು ಯಾರು? |Speed News Kannada

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಟಿವಿಕೆ ಮುಖ್ಯಸ್ಥ ವಿಜಯ್‌ ಕೇವಲ 10 ಸ್ಥಾನಗಳ ಕೊರತೆ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು 15  ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆಗೆ ಕಷ್ಟ ಎದುರಾಗಲಾರದು. ಈಗಾಗಲೇ ಸಿಪಿಎಂ ಬೆಂಬಲ ನೀಡಲು ಮುಂದೆ ಬಂದಿದೆ.

ಸರ್ಕಾರ ರಚಿಚನೆಗೆ ವಿಜಯ್ ಅವರು ನಮ್ಮ ಬೆಂಬಲ ಕೇಳಿದರೆ, ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸಿಪಿಎಂ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ.

ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಿದ್ದು, ಸ್ಪಷ್ಟಮತಕ್ಕೆ 118 ಸ್ಥಾನಗಳು ಬೇಕಿವೆ.  ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಸರ್ಕಾರ ರಚಿಸಲು 10 ಸ್ಥಾನಗಳ ಅವಶ್ಯಕತೆ ಇದೆ.

ವಿಜಯ್ ಅವರಿಗೆ ಮುಂದಿನ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಯ ಇತರ ಮಿತ್ರ ಪಕ್ಷಗಳೂ ಬೆಂಬಲ ನೀಡುವ ಸಾಧ್ಯತೆಗಳಿವೆ. ಕಾಂಗ್ರೆಸ್ 5, ವಿಸಿಕೆ, ಸಿಪಿಐ (ಎಂ), ಸಿಪಿಐ, ಡಿಎಂಡಿಕೆ ಮತ್ತು ಐಯುಎಂಎಲ್ ತಲಾ 2 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಈ 6 ಪಕ್ಷಗಳು ಒಟ್ಟು 15 ಕ್ಷೇತ್ರಗಳಲ್ಲಿ ಗೆದ್ದಿವೆ. ಹಾಗಾಗಿ ಟಿವಿಕೆ ಸರ್ಕಾರ ರಚಿಸಲು ಕಷ್ಟವಾಗಲಾರದು. ಎಲ್ಲರ ಕಣ್ಣು ಈ ಪಕ್ಷಗಳತ್ತ ನೆಟ್ಟಿದ್ದು ಯಾರು ಬೆಂಬಲ ನೀಡಬಹುದು ಎಂಬ ಕುತೂಹಲ ಮೂಡಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.