2026-07-23 08:28:25

Tamilnadu vs Karnataka Supreme Court Important Order.! | ತಮಿಳುನಾಡು vs ಕರ್ನಾಟಕ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ.! | Speed News Kannada

Tamilnadu vs Karnataka Supreme Court Important Order.! | ತಮಿಳುನಾಡು vs ಕರ್ನಾಟಕ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ.! | Speed News Kannada

ಕರ್ನಾಟಕ ಮತ್ತು ತಮಿಳುನಾಡು ನದಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌‌ನಲ್ಲಿ ಇಂದು ವಿಚಾರಣೆ ನಡೆದಿದ್ದು, ಮಹತ್ವದ ಆದೇಶ ನೀಡಿದ್ದಾರೆ. ದಕ್ಷಿಣ ಪಿನಾಕಿನಿ ನದಿ ವಿವಾದ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುಡುವು ನೀಡಿದೆ. ನೀರಿನ ಹಂಚಿಕೆ ವಿವಾದಗಳು ಭಾರತದಲ್ಲಿ ಇನ್ನು ಮುಂದುವರೆದಿದೆ. ಅಂತಹ ಒಂದು ವಿವಾದವೇ ದಕ್ಷಿಣ ಪಿನಾಕಿನಿ ಅಥವಾ ಪೆನ್ನೈಯಾರ್ ನದಿ ವಿವಾದ ಕೂಡ ಆಗಿದೆ.
ಕರ್ನಾಟಕ ಸರ್ಕಾರ 2019ರಲ್ಲಿ ಪೆನ್ನೈಯಾರ್ ನದಿಯ ಮೇಲೆ ಹೊಸ ಜಲಾಶಯಗಳ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಇದರಿಂದ ತಮಿಳುನಾಡಿಗೆ ನೀರು ಕಡಿಮೆಯಾಗುತ್ತದೆ ಎಂದು ತಮಿಳುನಾಡು ಆರೋಪಿಸಿತು. 2022ರಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೂಟ್ ಫೈಲ್ ಮಾಡಿತು. ಕರ್ನಾಟಕದ ನಿರ್ಧಾರವು ನೀರಿನ ಹಂಚಿಕೆಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿತು. ಕರ್ನಾಟಕ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ನದಿಯ ಉಗಮ ನಮ್ಮಲ್ಲಿದ್ದು, ನೀರನ್ನು ಬಳಸುವ ಹಕ್ಕು ನಮಗಿದೆ ಎಂದು ಹೇಳಿತ್ತು. 
ಸುಪ್ರೀಂ ಕೋರ್ಟ್‌ನ ಈ ನಿರ್ಧಾರದಿಂದ ದಕ್ಷಿಣ ಪಿನಾಕಿನಿ ನದಿ ವಿವಾದಕ್ಕೆ ಕಾನೂನು ರೂಪ ನೀಡುವ ನಿರೀಕ್ಷೆ ಇದೆ. ಇದರಿಂದಾಗಿ ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರ್ಕಾರಕ್ಕೆ ಗುಡುವು ನೀಡಿ ನ್ಯಾಯಾಧಿಕರಣ ರಚನೆಗೆ ಆದೇಶ ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.