ಚೆನ್ನೈ: ದೇವಸ್ಥಾನ, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ ಒಟ್ಟು 717 ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ (TASMAC) ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಆದೇಶಿಸಿದ್ದಾರೆ.
ಮೊದಲ ಭಾಷಣದಲ್ಲೇ ರಾಜ್ಯದ ಸಾಲದ ಬಗ್ಗೆ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮೊದಲ ಮಹತ್ವದ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.
ವಿಜಯ್ ಅವರು ‘ವ್ಯಸನ ಮುಕ್ತ ತಮಿಳುನಾಡು’ ನಿರ್ಮಾಣ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆಯಾಗಿದೆ.
ಸರ್ಕಾರಿ ಸ್ವಾಮ್ಯದ TASMAC ರಾಜ್ಯಾದ್ಯಂತ 4,765 ಮದ್ಯದ ಅಂಗಡಿಗಳನ್ನು ನಡೆಸುತ್ತಿದ್ದು, ಅದರಲ್ಲಿ ದೇವಸ್ಥಾನ, ಶಿಕ್ಷಣ ಸಂಸ್ಥೆಗಳು ಬಸ್ ನಿಲ್ದಾಣಗಳ ಸಮೀಪವಿರುವ 255 ಅಂಗಡಿಗಳನ್ನು ಮುಚ್ಚಲು 2 ವಾರಗಳ ಗಡುವು ನೀಡಲಾಗಿದೆ.
ತಮಿಳುನಾಡು ಸರ್ಕಾರಕ್ಕೆ TASMAC ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸ್ಕಕೆ ಹೆಚ್ಚಿನ ಆದಾಯ ಹರಿದುಬರುತ್ತಿದೆ. ಮದ್ಯಯ ಮಾರಾಟದಿಂದ 2025ರಲ್ಲಿ ರೂ. 48,000 ಕೋಟಿ ಆದಾಯ ಬಂದಿತ್ತು. ಕಳೆದ ವರ್ಷ ಟಾಸ್ಮಾಕ್ ಉದ್ಯಮದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.