2026-06-08 01:33:38

Tamilnadu cm joseph viijay wins floor test, proves majority| ವಿಶ್ವಾಸಮತ ಯಾಚನೆಯಲ್ಲೂ ಗೆದ್ದ ತಮಿಳುನಾಡು ಸಿಎಂ ವಿಜಯ್ | Speed News Kannada

Tamilnadu cm joseph viijay wins floor test, proves majority| ವಿಶ್ವಾಸಮತ ಯಾಚನೆಯಲ್ಲೂ ಗೆದ್ದ ತಮಿಳುನಾಡು ಸಿಎಂ ವಿಜಯ್ | Speed News Kannada

ಚೆನ್ನೈ: ಮುಖ್ಯಮಂತ್ರಿ ಜೋಸೆಫ್ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ತಮಿಳುನಾಡು ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಸಾಬೀತು ಮಾಡಿದೆ. 144 ಶಾಸಕರು ಸರ್ಕಾರದ ಪರವಾಗಿ ಮತ್ತು 22 ಶಾಸಕರು ವಿರುದ್ಧವಾಗಿ ಮತ ಚಲಾಯಿಸಿದರು. ಡಿಎಂಕೆ ಶಾಸಕರು ಸಭಾತ್ಯಾಗ ಮಾಡಿದ್ದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸದಸ್ಯರ ಬೆಂಬಲ ಬೇಕಿತ್ತು. ಆದರೆ 144 ಶಾಸಕರ ಬೆಂಬಲದೊಂದಿಗೆ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ವಿಶ್ವಾಸವನ್ನು ಗೆದ್ದಿದೆ. ಇವರಿಗೆ ಕಾಂಗ್ರೆಸ್‌, ವಿಸಿಕೆ, ಐಯುಎಂಎಲ್‌, ಸಿಪಿಐ, ಸಿಪಿಐಎಂ ಪಕ್ಷಗಳಷ್ಟೇ ಅಲ್ಲದೆ ಎಐಎಡಿಎಂಕೆಯ ವೇಲುಮಣಿ ಮತ್ತು ಷಣ್ಮುಗಂ ಬಣದ 22 ಬಂಡಾಯ ಶಾಸಕರು ಬೆಂಬಲಿಸಿದ್ದಾರೆ.

ಈ ಮೊದಲು ಸದನದಲ್ಲಿ ವಿಶ್ವಾಸಮತಕ್ಕೆ ಸಂಬಂಧಿಸಿದಂತೆ ಸಿಎಂ ವಿಜಯ್‌ ಅವರು ನಿರ್ಣಯ ಮಂಡಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.