2026-06-08 01:25:19

Tamil Nadu pre-poll survey published|ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟ|Speed News Kannada

Tamil Nadu pre-poll survey published|ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟ|Speed News Kannada

ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ M. K.ಸ್ಟಾಲಿನ್‌ ನೇತೃತ್ವದ DMK ಮೈತ್ರಿಕೂಟ 234 ಕ್ಷೇತ್ರಗಳ ಪೈಕಿ 181ರಿಂದ 189 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ ಶೇಕಡಾವಾರು ಸುಮಾರು 40.1% ಎಂದು ಅಂದಾಜಿಸಲಾಗಿದೆ.ಇದಕ್ಕೆ ವಿರುದ್ಧವಾಗಿ, AIADMK ನೇತೃತ್ವದ ಎನ್‌ಡಿಎ ಮೈತ್ರಿ 38ರಿಂದ 42 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ. ಮತ ಶೇಕಡಾವಾರು ಸುಮಾರು 29% ಎಂದು ಹೇಳಲಾಗಿದೆ.ನಟ-ರಾಜಕಾರಣಿ ವಿಜಯ್‌ ಅವರ TVK ಪಕ್ಷವು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, 8ರಿಂದ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಯುವ ಮತದಾರರ ಮೇಲೆ ಇವರ ಪ್ರಭಾವ ಹೆಚ್ಚಿದೆ ಎಂದು ಸಮೀಕ್ಷೆ ಹೇಳಿದೆ.


ಡಿಎಂಕೆ ಸರ್ಕಾರದ ಕಲ್ಯಾಣ ಯೋಜನೆಗಳು-ಉಚಿತ ಬಸ್ ಪ್ರಯಾಣ, ಮಹಿಳಾ ಸಹಾಯ ಯೋಜನೆಗಳು-ಗ್ರಾಮೀಣ ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ವಿರೋಧ ಪಕ್ಷದ ಮತಗಳು ಎನ್‌ಡಿಎ ಮತ್ತು ಟಿವಿಕೆ ನಡುವೆ ವಿಭಜನೆಯಾಗುತ್ತಿರುವುದು ಡಿಎಂಕೆಗೆ ದೊಡ್ಡ ಲಾಭವಾಗಿ ಪರಿಣಮಿಸಿದೆ.ಒಟ್ಟಿನಲ್ಲಿ, ಸಮೀಕ್ಷೆಗಳು ಡಿಎಂಕೆ ಮೈತ್ರಿಗೆ ಸ್ಪಷ್ಟ ಮುನ್ನಡೆ ಸೂಚಿಸುತ್ತಿದ್ದರೂ, ಅಂತಿಮ ತೀರ್ಮಾನ ಮತದಾರರ ಕೈಯಲ್ಲಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.