2026-06-08 04:08:18

Tamil actor Vishal has transformed into a super fit man | ಸಖತ್ ಫಿಟ್ ಆಗಿ ಬದಲಾದ ತಮಿಳು ನಟ ವಿಶಾಲ್ ಜಿಮ್‌ನಲ್ಲಿ ಜಬರ್ದಸ್ತ್ ವರ್ಕೌಟ್ | Speed News Kannada

Tamil actor Vishal has transformed into a super fit man | ಸಖತ್ ಫಿಟ್ ಆಗಿ ಬದಲಾದ ತಮಿಳು ನಟ ವಿಶಾಲ್ ಜಿಮ್‌ನಲ್ಲಿ ಜಬರ್ದಸ್ತ್ ವರ್ಕೌಟ್ | Speed News Kannada

ತಮಿಳು ನಟ, ನಿರ್ಮಾಪಕ ವಿಶಾಲ್ ಅವರು ಸಖತ್ ಫಿಟ್ ಆಗಿದ್ದಾರೆ. ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿ ಮತ್ತೆ ಕಂಬ್ಯಾಕ್ ಮಾಡಿದ ವಿಡಿಯೊವನ್ನು ನಟ ವಿಶಾಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವರ್ಕೌಟ್ ವಿಡಿಯೊ ನೋಡಿದ ಅವರ ಅಭಿಮಾನಿಗಳು 'ಸೂಪರ್ ಅಣ್ಣ', 'ಕಂಬ್ಯಾಕ್ ಹೀರೋ' ಅಂತ ಕಮೆಂಟ್ ಮಾಡಿದ್ದಾರೆ. ತಮಿಳು ನಟ ವಿಶಾಲ್ ಕೆಲವು ತಿಂಗಳುಗಳ ಹಿಂದೆ ನಟ ವಿಶಾಲ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಚೆನ್ನೈನಲ್ಲಿ ನಡೆದಿದ್ದ 'ಮದಗಜರಾಜ' ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶಾಲ್ ಅವರು ತೀವ್ರ ಬಳಲಿರುವಂತೆ ಕಂಡು ಬಂದಿದ್ದರು. ಅದೇ ವೇಳೆ ಕಾರ್ಯಕ್ರಮದಲ್ಲಿ ವಿಶಾಲ್ ಮಾತನಾಡುವಾಗ ಅವರ ಕಣ್ಣು ಕೆಂಪಾಗಿದ್ದವು, ಮೈ-ಕೈ ನಡುಗುತ್ತಿರುವುದು ಕಂಡು ಬಂದಿತ್ತು.
ಇದರಿಂದ ಅವರ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಈ ಹಿಂದೆ ತೆರೆ ಕಂಡಿದ್ದ 'ಮಾರ್ಕ್ ಆಯಂಟನಿ' ಸಿನಿಮಾದ ಶೂಟಿಂಗ್ ವೇಳೆ ನಟ ವಿಶಾಲ್ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲಿಂದ ಅವರ ಆರೋಗ್ಯದಲ್ಲಿ ತೊಂದರೆ ಶುರುವಾಯಿತು ಎಂದು ವರದಿಗಳು ತಿಳಿಸಿದ್ದವು. ಹಲವು ದಿನಗಳ ಬಳಿಕ ನಟ ವಿಶಾಲ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಜಿಮ್‌ನಲ್ಲಿ ಕಾಲಕಳೆಯುತ್ತ ಜಬರ್ದಸ್ತ್ ಆಗಿ ವರ್ಕೌಟ್ ಮಾಡುವ ಮೂಲಕ ಸಹಜ ಸ್ಥಿತಿಗೆ ಮರಳಿದ್ದಾರೆ. ಇದೇ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ನಟನನ್ನು ಮತ್ತೆ ಫಿಟ್ ಆಗಿ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.