2026-06-08 03:54:18

Taliban warns Pakistan | ಖಂಡಿತ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಪಾಕಿಸ್ತಾನಕ್ಕೆ ತಾಲಿಬಾನ್‌ ಎಚ್ಚರಿಕೆ | Speed News Kannada

Taliban warns Pakistan | ಖಂಡಿತ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಪಾಕಿಸ್ತಾನಕ್ಕೆ ತಾಲಿಬಾನ್‌ ಎಚ್ಚರಿಕೆ | Speed News Kannada

ಅಫ್ಘಾನಿಸ್ತಾನ: ಭಯೋತ್ಪಾದಕ ನೆಲೆಗಳ ಮೇಲೆ ಪಾಕಿಸ್ತಾನದಿಂದ ವೈಮಾನಿಕ ದಾಳಿ: ೧೭ ಜನರ ಸಾವು ಕಾಬೂಲ (ಅಫ್ಘಾನಿಸ್ತಾನ) - 'ಜೇನು ಗೂಡಿಗೆ ಕೈ ಹಾಕಿದಂತೆ' ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಮತ್ತು ಏರ್ ಸೈಕ್ ನ ಸೇಡನ್ನು ತೀರಿಸಿಕೊಳ್ಳಲಾಗುವುದು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವು ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ಪ್ರಾಂತ್ಯಗಳಲ್ಲಿ ಪಾಕಿಸ್ತಾನಿ ವಾಯುಪಡೆಯು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಂದೇ ಕುಟುಂಬದ ೧೭ ಜನರು ಸಾವನ್ನಪ್ಪಿದ್ದಾರೆ.
೧. ತಾಲಿಬಾನ್ ಸರಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಕುರಿತು ಮಾತನಾಡಿ, ಪಾಕಿಸ್ತಾನದ ಈ ಕೃತ್ಯವು ಖಂಡನೀಯವಾಗಿದೆ. ನಾವು ಇದರ ಪ್ರತಿಕಾರವನ್ನು ಖಂಡಿತ ತೀರಿಸಿಕೊಳ್ಳುತ್ತೇವೆ. ಪಾಕಿಸ್ತಾನವು ವಾಯುಗಡಿಯ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಅಫ್ಘಾನಿಸ್ತಾನಕ್ಕೆ ಪ್ರತಿಯಾಗಿ ಕ್ರಮ ಕೈಗೊಳ್ಳುವ ಪೂರ್ಣ ಅಧಿಕಾರವಿದೆ. ಸರಿಯಾದ ಸಮಯ ಬಂದಾಗ ನಾವು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
೨. ಪಾಕಿಸ್ತಾನದ ಮಾಹಿತಿ ಸಚಿವ ಅಟ್ಯಾವುಲ್ಲಾ ತರಾರ್ ಮಾತನಾಡಿ, ಪಾಕಿಸ್ತಾನವು ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಂಗಸಂಸ್ಥೆಯೊಂದನ್ನು ಗುರಿಯಾಗಿಸಿತು ಎಂದು ತಿಳಿಸಿದ್ದಾರೆ. ಈ ಸಂಘಟನೆಯು ಇತ್ತೀಚೆಗೆ ಇಸ್ಲಾಮಾಬಾದ್ ನ ಮಸೀದಿಯೊಂದರ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು, ಈ ದಾಳಿಯಲ್ಲಿ ೩೧ ಜನರು ಸಾವನ್ನಪ್ಪಿದ್ದರು ಮತ್ತು ೧೬೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ೨೦೦೮ ರ ಮ್ಯಾರಿಯಟ್ ಹೋಟೆಲ್ ಬಾಂಬ್ ಸ್ಫೋಟದ ನಂತರ ಇಸ್ಲಾಮಾಬಾದ್ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.