2026-03-10 04:26:28

T20 World Cup trophy ready by Indian born designer | ಭಾರತ ಮೂಲದ ವಿನ್ಯಾಸಕರಿಂದ ಸಿದ್ಧವಾಗಿದೆ ಟಿ20 ವಿಶ್ವಕಪ್ ಟ್ರೋಫಿ | Speed News Kannada

 T20 World Cup trophy ready by Indian born designer | ಭಾರತ ಮೂಲದ ವಿನ್ಯಾಸಕರಿಂದ ಸಿದ್ಧವಾಗಿದೆ ಟಿ20 ವಿಶ್ವಕಪ್ ಟ್ರೋಫಿ | Speed News Kannada

ಅಹಮದಾಬಾದ್‌: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟಿ20 ವಿಶ್ವಕಪ್‌ನ ಫೈನಲ್ 2026ರ ಪಂದ್ಯವು ಇಂದು (ಮಾರ್ಚ್ 08) ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನೂ ಈ ವಿಶ್ವಕಪ್ ಟ್ರೋಫಿಯು ಭಾರತದ ಜೈಪುರ ಮೂಲದ ವಿನ್ಯಾಸಕರು ತಯಾರಿಸಿದ್ದಾರೆ ಎಂಬುದು ವಿಶೇಷ. ಜೈಪುರ ಮೂಲದ ಪ್ರಸಿದ್ದ ಟ್ರೋಫಿ ವಿನ್ಯಾಸಕರಾದ ಅಮಿತ್ ಪಬುವಾಲ್ ಅವರು ಟಿ20 ವಿಶ್ವಕಪ್‌ನ ಟ್ರೋಫಿ ತಯಾರಿಸಿದ್ದಾರೆ. ಟಿ20 ವಿಶ್ವಕಪ್‌ನ ಆರಂಭದ ಚೊಚ್ಚಲ ಟ್ರೋಫಿ ಆಸ್ಟ್ರೇಲಿಯಾ ಮೂಲದ ಮಿನೇಲ್ ಬ್ರೆಸ್ ಅವರ ಪರಿಕಲ್ಪನೆಯಲ್ಲಿ ಸಿದ್ದವಾಗಿತ್ತು.
ಭಾರತ vs ನ್ಯೂಜಿಲೆಂಡ್: ಟಿ20 ವಿಶ್ವಕಪ್‌ನಲ್ಲಿ ಯಾರಿಗೆ ಮೇಲುಗೈ 2007ರಲ್ಲಿ ಟ್ರೋಫಿಯ ಮೊದಲ ವಿನ್ಯಾಸ ಹಾಗೂ ರೂಪರೇಷೆಯನ್ನು ಮಿನೇಲ್ ಬ್ರೆಸ್ ಅವರು ಸಿದ್ಧಪಡಿಸಿದ್ದರು. ಅವರು ಈ ಹಿಂದೆ ವಿಶ್ವದ ಅತಿದೊಡ್ಡ ಬೆಳ್ಳಿ ಕಪ್ ಆದ 'ಫ್ರೆಂಡ್‌ಶಿಪ್ ಕಪ್' ಎಂಬ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದರು. ನಂತರ ಅವರಿಗೆ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸುವ ಆಹ್ವಾನ ದೊರೆಯಿತು ಎಂದು ಹೇಳಿದ್ದಾರೆ. 'ಆರಂಭದಲ್ಲಿ ಟ್ರೋಫಿಯನ್ನು ಟೈಟಾನಿಯಂ ಹಾಗೂ ಗಾಜು ಬಳಸಿ ತಯಾರಿಸಲು ನಿರ್ಧರಿಸಲಾಗಿತ್ತು. ಅದರಂತೆ ಟ್ರೋಫಿಯ ಹಲವು ಮಾದರಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಲೋಹದೊಂದಿಗೆ ಗಾಜನ್ನು ಸಂಯೋಜಿಸಿ ತಯಾರಿಸಲಾದ ಟ್ರೋಫಿ ಬೇಗನೆ ಒಡೆಯುತ್ತಿದ್ದ ಕಾರಣಕ್ಕಾಗಿ ಮೊದಲ ಪರಿಕ್ಷನೆಯನ್ನು ಕೈಬಿಡಲಾಯಿತು' ಎಂದು ಅಮಿತ್ ಪಬುವಾಲ್ ಹೇಳಿದ್ದಾರೆ.
ಅಂತಿಮವಾಗಿ ಬೆಳ್ಳಿ ಮತ್ತು ಪ್ಲಾಟಿನಂ ಸಂಯೋಗದಲ್ಲಿ ಟ್ರೋಫಿಯನ್ನು ತಯಾರಿಸಲು ನಿರ್ಧರಿಸಲಾಯಿತು. ಟಿ20 ವಿಶ್ವಕಪ್‌ಗಾಗಿ ತಯಾರಿಸಲಾದ ಮೂಲ ಟ್ರೋಫಿ ಐಸಿಸಿ ಕಚೇರಿಯಲ್ಲಿ ಇಂದಿಗೂ ಇದೆ. ಟ್ರೋಫಿಯ ಪ್ರತಿಕೃತಿಯನ್ನು ಗೆದ್ದ ತಂಡಕ್ಕೆ ನೀಡಲಾಗುತ್ತದೆ. ಎಂದು ಅವರು ಹೇಳಿದ್ದಾರೆ.
ಟಿ20 ವಿಶ್ವಕಪ್‌ನ ಟ್ರೋಫಿ ಸುಮಾರು 21 ಇಂಚು ಎತ್ತರ, 6 ಕೆ.ಜಿ ತೂಕವಿರಲಿದೆ. ಟ್ರೋಫಿಯನ್ನು ಬೆಳ್ಳಿಯಿಂದ ತಯಾರಿಸಿದ್ದು. ಪ್ಲಾಟಿನಂ ಲೇಪನ ಮಾಡಲಾಗುತ್ತದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.