2026-06-08 02:44:04

SunRisers Hyderabad Team Official Former Account Suspended | ಸನ್ ರೈಸರ್ಸ್ ಹೈದರಾಬಾದ್ ತಂಡದ ಅಧಿಕೃತ Xಖಾತೆ ಸಸ್ಪೆಂಡ್ | Speed News Kannada

SunRisers Hyderabad Team Official Former Account Suspended | ಸನ್ ರೈಸರ್ಸ್ ಹೈದರಾಬಾದ್ ತಂಡದ ಅಧಿಕೃತ Xಖಾತೆ ಸಸ್ಪೆಂಡ್ | Speed News Kannada

ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 'ದಿ ಹಂಡ್ರೆಡ್' ಹರಾಜಿನಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ 'ಸನ್‌ರೈಸರ್ಸ್ ಲೀಡ್ಸ್‌' ತಂಡದ ಅಧಿಕೃತ 'ಎಕ್ಸ್' (ಟ್ವಿಟ್ಟರ್) ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅಬ್ರಾರ್ ಅಹ್ಮದ್ ಅವರು ಭಾರತೀಯ ಮಾಲೀಕತ್ವದ ಫ್ರಾಂಚೈಸಿಯ ಭಾಗವಾದ ಪಾಕಿಸ್ತಾನದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಇವರನ್ನು ಸುಮಾರು  2.34 ಕೋಟಿ ರೂ. (190,000 ಪೌಂಡ್) ನೀಡಿ ಖರೀದಿಸಲಾಗಿದೆ.
ಭಾರತೀಯ ಅಭಿಮಾನಿಗಳ ಆಕ್ರೋಶ : ಸನ್‌ರೈಸರ್ಸ್ ಹೈದರಾಬಾದ್ (SRH) ಮಾಲೀಕತ್ವದ ತಂಡವು ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ್ದು ಭಾರತೀಯ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ #BoycottSRH ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕಾವ್ಯಾ ಮಾರನ್ ವಿರುದ್ಧ ಟೀಕೆ: ಫ್ರಾಂಚೈಸಿ ಮತ್ತು ಅದರ ಸಹ-ಮಾಲೀಕಿ ಕಾವ್ಯಾ ಮಾರನ್ ಅವರು ಈ ನಿರ್ಧಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಸಸ್ಪೆಂಡ್ ಆಗಲು ಕಾರಣ: ಖಾತೆ ಸಸ್ಪೆಂಡ್ ಆದ ಬಗ್ಗೆ 'ಎಕ್ಸ್' ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ, ಪ್ಲಾಟ್‌ಫಾರ್ಮ್‌ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ ಎಂಬ ಸಂದೇಶ ಮಾತ್ರ ಕಾಣಿಸುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.