2026-06-08 01:30:29

Sumoto Case filed against Actor Surya Prakhyath | ಥಿಯೇಟರ್‌ನಲ್ಲಿ ಲಾಂಗ್ ಹಿಡಿದು ಪೋಸ್ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಸುಮೋಟೊ ಕೇಸ್ ದಾಖಲು | Speed News Kannada

Sumoto Case filed against Actor Surya Prakhyath | ಥಿಯೇಟರ್‌ನಲ್ಲಿ ಲಾಂಗ್ ಹಿಡಿದು ಪೋಸ್ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಸುಮೋಟೊ ಕೇಸ್ ದಾಖಲು | Speed News Kannada

ಬೆಂಗಳೂರುದಲ್ಲಿ ಚಿತ್ರಮಂದಿರದೊಳಗಿನ ಸಂಭ್ರಮವೇ ಇದೀಗ ಪ್ರಕರಣವಾಗಿ ಪರಿಣಮಿಸಿದೆ. ಜೆಸಿ ಸಿನಿಮಾದ ನಟ ಸೂರ್ಯ ಪ್ರಖ್ಯಾತ್ ವಿರುದ್ಧ ಗೋವಿಂದರಾಜ ನಗರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ಜೆಸಿ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ನಟ ಸೂರ್ಯ ಪ್ರಖ್ಯಾತ್ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಣೆಗೆ ಚಿತ್ರಮಂದಿರಕ್ಕೆ ಬಂದಿದ್ದರು.
ಈ ವೇಳೆ ಅಭಿಮಾನಿಗಳ ನಡುವೆ ಲಾಂಗ್ ಹಿಡಿದು ಪೋಸ್ ನೀಡಿದ್ದು ಅದನ್ನು ಅಭಿಮಾನಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಗಮನಿಸಿ, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವಸ್ತು ಪ್ರದರ್ಶನ ಮಾಡಿದ ಆರೋಪದಡಿ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ವಿಡಿಯೋ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರು ಲಾಂಗ್ ಹೇಗೆ ಬಂದಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.