2026-06-08 01:25:24

Student suffers heart attack before taking exam today | ಇಂದು ಪರೀಕ್ಷೆ ಬರೆಯುವ ಮುನ್ನವೇ ಹೃದಯಘಾತಕ್ಕೆ ಒಳಗಾದ ವಿದ್ಯಾರ್ಥಿನಿ | Speed News kannada

Student suffers heart attack before taking exam today | ಇಂದು ಪರೀಕ್ಷೆ ಬರೆಯುವ ಮುನ್ನವೇ ಹೃದಯಘಾತಕ್ಕೆ ಒಳಗಾದ ವಿದ್ಯಾರ್ಥಿನಿ | Speed News kannada

ಬೆಳಗಾವಿ: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಉತ್ಸಾಹದಿಂದಲೇ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಅಸುನೀಗಿರುವ ದುರಂತ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ 17 ವರ್ಷದ ಭೂಮಿಕಾ ಮಾಳಂಗಿ ಮೃತ ವಿದ್ಯಾರ್ಥಿನಿ. 
ಈಕೆ ಸ್ನಾನ ಮುಗಿಸಿ ಬಾತ್‌ ರೂಂನಿಂದ ಹೊರಬರುತ್ತಿದ್ದಂತೆ ದಿಢೀರ್ ಆಗಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಭೂಮಿಕಾ ಕೊನೆಯುಸಿರೆಳೆದಿದ್ದಾಳೆ.
ವಿಧಿಯಾಟಕ್ಕೆ ಬಲಿಯಾದ ಭೂಮಿಕಾ ಜೀವನದ ಪರೀಕ್ಷೆಯನ್ನೇ ಮುಗಿಸಿರುವುದು ದುರದೃಷ್ಟಕರ ಸಂಗತಿ. ಈ ಘಟನೆ ಇಡೀ ಗ್ರಾಮದಲ್ಲಿ ಶೋಕವನ್ನು ಮೂಡಿಸಿದೆ. ಪೋಷಕರು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪೋಷಕರ ಹಾಗೂ ಗ್ರಾಮಸ್ಥರ ಎದೆಯನ್ನು ಭಾರವಾಗಿಸಿದೆ. ಪರೀಕ್ಷೆಯ ಒತ್ತಡ ಅಥವಾ ಆರೋಗ್ಯದ ಏರುಪೇರು ಈ ಸಾವಿಗೆ ಕಾರಣವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತುಂಬು ವಯಸ್ಸಿನ ಮಗಳ ಅನಿರೀಕ್ಷಿತ ಸಾವಿನಿಂದ ಬಂಬಲವಾಡ ಗ್ರಾಮದಲ್ಲಿ ಶೋಕಮಯ ವಾತಾವರಣ ನಿರ್ಮಾಣವಾಗಿದ್ದು, ಪೋಷಕರ ಕ್ರಂದನ ಮುಗಿಲು ಮುಟ್ಟಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.