2026-06-08 01:30:55

Srileela From Actress To Doctor | ಸ್ಟಾರ್ ನಟಿಯಿಂದ ಡಾಕ್ಟರ್‌ವರೆಗೆ ಶ್ರೀಲೀಲಾ ಎಂಬಿಬಿಎಸ್ ಪದವಿ ಪಡೆದು ಅಧಿಕೃತವಾಗಿ ವೈದ್ಯೆ! | Speed News Kannada

Srileela From Actress To Doctor | ಸ್ಟಾರ್ ನಟಿಯಿಂದ ಡಾಕ್ಟರ್‌ವರೆಗೆ ಶ್ರೀಲೀಲಾ ಎಂಬಿಬಿಎಸ್ ಪದವಿ ಪಡೆದು ಅಧಿಕೃತವಾಗಿ ವೈದ್ಯೆ! | Speed News Kannada

ಕನ್ನಡತಿ ಶ್ರೀಲೀಲಾ ಇದೀಗ ಕೇವಲ ಬೇಡಿಕೆಯ ಸ್ಟಾರ್ ನಟಿ ಮಾತ್ರವಲ್ಲ, ಅಧಿಕೃತವಾಗಿ ವೈದ್ಯೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ, ನೃತ್ಯ ಕಾರ್ಯಕ್ರಮಗಳು ಮತ್ತು ಬಹುಭಾಷಾ ಬ್ಯುಸಿ ಶೆಡ್ಯೂಲ್ ನಡುವೆ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರುವ ಅವರು, ನಿನ್ನೆಯಷ್ಟೇ ಮುಂಬೈನ ಡಿವೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ವೈದ್ಯ ಪದವಿ ಸ್ವೀಕರಿಸಿದ್ದಾರೆ.ಬಾಲ್ಯದಿಂದಲೇ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದ ಶ್ರೀಲೀಲಾ, ಕನ್ನಡ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿ ಟಾಪ್ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಬಳಿಕ ಬಾಲಿವುಡ್‌ ಗೂ ಕಾಲಿಟ್ಟ ಅವರು ಒಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ಈಗ ತಮಿಳು ಚಿತ್ರರಂಗದಲ್ಲೂ ಭಾರೀ ಬೇಡಿಕೆ ಹೊಂದಿದ್ದಾರೆ.
ಪದವಿ ವಿತರಣಾ ಸಮಾರಂಭದ ವೇಳೆ ವೈದ್ಯರ ಪ್ರತಿಜ್ಞೆ ಸ್ವೀಕರಿಸುವ ದೃಶ್ಯಗಳು ಮತ್ತು 'ನೀವುಗಳು ಈಗ ಅಧಿಕೃತವಾಗಿ ವೈದ್ಯರು' ಎಂಬ ಘೋಷಣೆ ಕೇಳುತ್ತಿದ್ದಂತೆಯೇ ಖುಷಿಯಿಂದ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.ಸಿನಿಮಾ ನಟ-ನಟಿಯರು ಓದಿನಲ್ಲಿ ಹಿಂದುಳಿದವರು ಎನ್ನುವ ಮಾತುಗಳಿಗೆ ಶ್ರೀಲೀಲಾ ಗಟ್ಟಿಯಾದ ಉತ್ತರ ನೀಡಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಬಳಿಕ ಇದೀಗ ಶ್ರೀಲೀಲಾ ಸಹ ವೈದ್ಯೆ ಪಟ್ಟಕ್ಕೇರಿದ್ದಾರೆ. ಸಿನಿಮಾ ಫ್ರಂಟ್‌ನಲ್ಲಿ ಶ್ರೀಲೀಲಾ ಸಖತ್ ಬ್ಯುಸಿ. ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಗಬ್ಬರ್ ಸಿಂಗ್', ತಮಿಳಿನಲ್ಲಿ ಧನುಶ್ ಹಾಗೂ ಪ್ರದೀಪ್ ರಂಗನಾಥನ್ ಸಿನಿಮಾಗಳು, ಹಿಂದಿಯಲ್ಲಿ 'ಆಶಿಖಿ 3' ಮತ್ತು ರರ್ ಸಿಂಗ್ ಜೊತೆಗೆ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ.ಒಟ್ಟಾರೆ, ಸ್ಟಾರ್ ನಟಿಯಿಂದ ಡಾಕ್ಟರ್ ಆಗಿ ಬೆಳೆಯುತ್ತಿರುವ ಶ್ರೀಲೀಲಾ ಈಗ ದ್ವಿಪಾತ್ರ ಯಶಸ್ಸಿನ ಪ್ರತಿರೂಪವಾಗಿ ಹೊರಹೊಮ್ಮಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.