2026-06-08 06:47:05

Speed News Kannada public offering | ಸ್ಪೀಡ್‌ ನ್ಯೂಸ್‌ ಲೋಕಾರ್ಪಣೆ..| Speed News Kannada

Speed News Kannada public offering | ಸ್ಪೀಡ್‌ ನ್ಯೂಸ್‌ ಲೋಕಾರ್ಪಣೆ..| Speed News Kannada

ಕರ್ನಾಟಕದಲ್ಲಿ ಮನೆ ಮಾತಾಗಿರುವ, ಪಿನ್‌ ಟು ಪಿನ್‌ ಸುದ್ದಿ ನಿಮಗೆ ತಲುಪಿಸುತ್ತಿರುವ ಸ್ಪೀಡ್‌ ನ್ಯೂಸ್‌ ಕನ್ನಡ ಇನ್ಮುಂದೆ ಎಲ್ಲಾ ಕೇಬಲ್‌ ನೆಟ್‌ವರ್ಕ್‌ಗಳಲ್ಲಿ ಲಭ್ಯವಿದೆ.  ಅಷ್ಟೇ ಅಲ್ಲ ಇನ್ಮುಂದೆ ವೆಬ್‌ ಸೈಟ್‌ಗಳಲ್ಲೂ ನಿಮ್ಮ ಸ್ಪೀಡ್‌  ನ್ಯೂಸ್‌ ಕನ್ನಡ ಸುದ್ದಿಗಳನ್ನ  ನೇರವಾಗಿ ನಿಮಗೆ ಮುಟ್ಟಿಸುವ ಕೆಲಸ ಮಾಡ್ತಿದೆ. ಇನ್ಮೇಲೆ ಎಲ್ಲಾ ಅಧಿಕೃತ ವೆಬ್‌ಸೈಟ್‌ಗಳಲ್ಲೂ ನಿಮ್ಮ ಸ್ಪೀಡ್‌ ಲಭ್ಯವಿದೆ.  ಸುದ್ದಿಗಳನ್ನ ನಿರಂತರವಾಗಿ ಯಾವುದೇ ಫಿಲ್ಟರ್‌ ಇಲ್ಲದೇ ನಿಖರವಾಗಿ,  ನೇರವಾಗಿ ನಿಮ್ಮ ಮನೆ ಮನೆಗೆ ತಲುಪಿಸೋದು ನಮ್ಮ ಸ್ಪೀಡ್‌ ನ್ಯೂಸ್‌ ಕನ್ನಡ ವಾಹಿನಿಯ ಮುಖ್ಯ ಗುರಿ. ಇನ್ಮುಂದೆ ನೀವು ಮನೆಯಲ್ಲೇ ಕುಳಿತು ನಿಮ್ಮ ಟಿವಿ. ಮೊಬೈಲ್‌ ಆನ್‌ ಮಾಡಿದ್ರೆ ಸಾಕು ಸ್ಪೀಡ್‌ ನ್ಯೂಸ್‌ ಸ್ಪೀಡ್‌ ಆಗಿ ನಿಮ್ಮ ಮುಂದೆ ಬರಲಿದೆ. ನಮ್ಮ ಸ್ಪೀಡ್‌ ನ್ಯೂಸ್‌ ಕನ್ನಡ ಸುದ್ದಿ ವಾಹಿನಿಯ ವೆಬ್‌ಸೈಟ್‌ ಅನ್ನು  ಅಧಿಕೃತವಾಗಿ ಬಿಜಿಎಸ್‌ ಸಮೂಹ ಸಂಸ್ತೆಗಳ ವ್ಯವಸ್ಥಾಪಕ ನಿರ್ದೇಶಕರು, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಅತ್ಯಾಪ್ತರಾದ ಡಾ. ಶ್ರೀ ಶ್ರೀ ಶೇಖರ್‌ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಲೋಕಾಪರ್ಣೆ ಮಾಡಿದ್ರು.

ಈ ಸಂದರ್ಭದಲ್ಲಿ ಸ್ಪೀಡ್‌ ನ್ಯೂಸ್‌ ಕನ್ನಡ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾದ ವಿ.ವೀರೇಶ್‌, ಸಿಇಓ ಶ್ರೀಧರ್‌ ಅವರು , ಪ್ರಧಾನ ಸಂಪಾದಕರು ಪ್ರೀತಮ್ ಹಾಗೂ ವಾಹಿನಿಯ ಎಲ್ಲ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು .

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.