2026-06-08 01:31:46

Sonu Srinivas will now have to pay to watch exclusive videos | ಸೋನು ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ವಿಡಿಯೋ ನೋಡೋಕೆ ಇನ್ಮುಂದೆ ಹಣ ಕೊಡ್ಬೇಕು | Speed news kannada

Sonu Srinivas will now have to pay to watch exclusive videos | ಸೋನು ಶ್ರೀನಿವಾಸ್ ಎಕ್ಸ್‌ಕ್ಲೂಸಿವ್‌ ವಿಡಿಯೋ ನೋಡೋಕೆ ಇನ್ಮುಂದೆ ಹಣ ಕೊಡ್ಬೇಕು | Speed news kannada

ಸೋನು ಶ್ರೀನಿವಾಸ್ ಗೌಡ ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿ ಇರ್ತಾರೆ. ಸೋಷಿಯಲ್ ಮೀಡಿಯಾ ಮೂಲಕವೇ ಫೇಮಸ್ ಆಗಿದ್ದ ಸೋನು, ಆಗಾಗ ಟ್ರೋಲ್ ಆಗುತ್ತಲೇ ಇರ್ತಾರೆ. ಕಳೆದ ಒಂದು ವಾರದಿಂದ ಅಂತೂ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಲವ್‌ & ಬ್ರೇಕಪ್ ಸ್ಟೋರಿಯನ್ನು ಹೇಳುತ್ತಾ ಮತ್ತೆ ಟ್ರೆಂಡಿಂಗ್ ನಲ್ಲಿದ್ದಾರೆ. ಹೀಗಿರುವಾಗ ಇದೀಗ ಸೋನು ಗೌಡ ಮತ್ತೊಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಏನದು ವಿಚಾರ ಅಂದ್ರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಇನ್ಮಾಗ್ರಾಮ್ ಸಬ್‌ಸ್ಕ್ರಿಪ್ಪನ್ ಅಂತ. ಈ ಮೂಲಕ ಅದೆಷ್ಟೋ ನಟಿಯರು ಸೋಷಿಯಲ್ ಮೀಡಿಯಾ ಇನ್ಫ್ಲ್ಯೂನ್ಸೆರ್ಸ್ ತಮ್ಮ ಎಕ್ಸ್‌ಕ್ಲೋಸಿವ್ ಕಂಟೆಂಟ್‌ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದ್ರೆ ಇಲ್ಲೊಂದು ಮುಖ್ಯವಾದ ವಿಚಾರ ಇದೆ ಆ ಎಕ್ಸ್‌ಕ್ಯೂಸಿವ್ ಕಂಟೆಂಟ್ ನೋಡಬೇಕಿದ್ರೆ ತಿಂಗಳಿಗೆ ಹಣವನ್ನು ಕಟ್ಟಿ ಸಬ್‌ಸ್ಟೈಬ್ ತೆಗೆದುಕೊಳ್ಳಬೇಕಾಗುತ್ತದೆ.

ಈ ಟ್ರೆಂಡ್ ಶುರುವಾಗಿ ಸುಮಾರು ದಿನಗಳೇ ಕಳೆದಿದೆ. ಆ್ಯಂಕರ್ ವಿಷ್ಣು ಪ್ರಿಯಾ, ಬಾಲಿವುಡ್ ನಟಿ ನೇಹಾ ಶರ್ಮಾ, ಕೇರಳ ಮೂಲದ ಡಿಜಿಟಲ್ ಕ್ರಿಯೇಟರ್ ಅಶ್ವನಿ ಎ. ಸೇರಿದಂತೆ ಅನೇಕರು ಈ ಸಬ್‌ಸ್ಕ್ರಿಪ್ಪನ್ ಟ್ರೆಂಡ್ ಅನ್ನು ಶುರುಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕವೇ ತಿಂಗಳಿಗೆ ಲಕ್ಷ, ಲಕ್ಷ ಹಣ ಸಂಪಾದನೆ ಮಾಡುತ್ತಿದರೆ. ಇದೀಗ ಕನ್ನಡಲ್ಲಿಯೂ ಈ ಟ್ರೆಂಡ್ ಶುರುವಾಗಿದೆ. ಸೋನು ಶ್ರೀನಿವಾಸ್ ಗೌಡ ಕೂಡಾ ಇನ್ಮಾಗ್ರಾಮ್ ಸಬ್‌ಸ್ಕ್ರಿಪ್ಪನ್ ಶುರುಮಾಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ 132 ಮಂದಿ ಸಬ್‌ಸ್ಕ್ರಿಪ್ಷನ್ ಪಡೆದಿದ್ದಾರೆ. ಹಾಗೆಯೇ ಪ್ರತೀ ತಿಂಗಳಿಗೆ 390 ರೂ. ಪೇ ಮಾಡಿ ಸೋನು ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಮ್ ಖಾತೆ ಸಬ್‌ಸ್ಕ್ರಿಪ್ಪನ್ ಪಡೆಯಬಹುದಾಗಿದೆ. ಇನ್ನು ಸೋನು ಗೌಡ ಏನೇ ಮಾಡಿದರು ಅದು ಸುದ್ದಿಯಾಗುವುದು ಸಾಮಾನ್ಯ. ಇದೀಗ ಅವರ ಸಬ್‌ಸ್ಕ್ರಿಪ್ಷನ್ ಆರಂಭಕ್ಕೂ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಕೆಲವರು ಬೆಂಬಲಿಸುತ್ತಿದ್ದರೆ, ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ಕಳೆದ ಒಂದು ವಾರದಿಂದ ಸೋನು ತನ್ನ ಬ್ರೇಕಪ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಕೆಲವು ವರ್ಷಗಳ ನಾನು ಆ ಹುಡುಗನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದೆ, ಆದ್ರೆ ಅದು ಕೆಲವೊಂದು ಕಾರಣಗಳಿಂದ ಹೆಚ್ಚು ಕಾಲ ಉಳಿಯಲಿಲ್ಲ ಬ್ರೇಕಪ್‌ ಆಯ್ತು. ಅದನ್ನು ಮರೆಯಬೇಕು ಅಂತ ನಾನು ನಿರ್ಧಾರ ಮಾಡಿದ್ದೆ, ಆದ್ರೆ ಅದು ಆಗ್ತಿಲ್ಲ. ಅವರು ಈಗ ಇಲ್ಲ. ನಮ್ಮ ಲವ್ ಬ್ರೇಕಪ್ ಬಳಿಕ ನನ್ನನ್ನು ಕಾಂಟ್ಯಾಕ್ಟ್‌ ಮಾಡೋಕೆ ಅವರು ತುಂಬ ಟ್ರೈ ಮಾಡಿದ್ದಾರೆ. ಆದ್ರೆ ಅದು ಆಗಿಲ್ಲ ಎಂದು ಸೋನು ಬೇಸರದಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ವಿಚಾರಗಳ ಮಧ್ಯೆ ಇದೀಗ ಸೋನು ಗೌಡ ಇನ್ಮಾಗ್ರಾಮ್ ಸಬ್‌ಸ್ಕ್ರಿಪ್ಪನ್ ಶುರು ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೀಗಾಗಿ ಈ ವಿಚಾರ ಎಲ್ಲಿಯ ವರೆಗೆ ತಲುಪುತ್ತದೆ ಎಂದು ಕಾದುನೋಡಬೇಕಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.