2026-03-07 12:55:08

Social media ban for children under 16 | ಭಾರತದಲ್ಲೂ 16ವರ್ಷ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್‌ | Speed News Kannada

Social media ban for children under 16 | ಭಾರತದಲ್ಲೂ 16ವರ್ಷ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್‌ | Speed News Kannada

ನವದೆಹಲಿ : ಹೇಳಿಕೇಳಿ ಈಗ ಸೋಷಿಯಲ್ ಮೀಡಿಯಾ ಜಮಾನ . ಸಾಮಾಜಿಕ ಜಾಲತಾಣಗಳಿಂದ ಉಪಯೋಗ ಎಷ್ಟಿದೊ ಅದರಿಂದ ಯಡವಟ್ಟು ಅಷ್ಟೇ ಇದೆ. ಪ್ರಮುಖವಾಗಿ ಯುವ ಸಮೂಹ ಸೋಷಿಯಲ್ ಮೀಡಿಯಾದಿಂದ ಹಾದಿ ತಪ್ಪುತ್ತಿದೆ ಎಂಬುದು ಹಲವರ ವಾದ. ಈ ನಿಟ್ಟಿನಲ್ಲಿ ಹೊಸ ವಿಚಾರವೊಂದು ಎಲ್ಲೆಡೆ ಸಂಚಲನ ಮೂಡಿಸಿದೆ. 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾ ಮತ್ತಿತರರಾಷ್ಟ್ರಗಳು ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿರುವಂತೆಯೇ ಈಗ ಭಾರತದಲ್ಲಿಯೂ ವಯಸ್ಸಿನ ಆಧಾರದ ಮೇಲೆ ನಿರ್ಬಂಧ ಹೇರಲು ಚರ್ಚೆ ನಡೆಯುತ್ತಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ವಯಸ್ಸಿನ ಆಧಾರದ ಮೇಲೆ ಸಾಮಾಜಿಕ ಜಾಲತಾಣ ಬಳಕೆ ಮೇಲೆ ನಿಯಂತ್ರಣ ಇರಬೇಕೆಂದು ಅನೇಕ ದೇಶಗಳು ಈಗ ಒಪ್ಪಿಕೊಂಡಿರುವ ವಿಷಯವಾಗಿದೆ. ಸರಕಾರ ಈಗ ವಯಸ್ಸಿನ ಆಧಾರದ ಮೇಲೆ ಸೋಷಿಯಲ್‌ ಮೀಡಿಯಾ ಬಳಕೆ ನಿರ್ಬಂಧ, ಡೀಪ್ ಫೇಕ್‌ಗಳ ಹಾವಳಿ ತಡೆ ಕುರಿತು ಚರ್ಚೆ ನಡೆಸುತ್ತಿದೆ ಎಂದಿದ್ದಾರೆ.
ಪ್ರಸ್ತುತ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರೋ ಯುವ ಸಮೂಹವು ಸೋಷಿಯಲ್ ಮೀಡಿಯಾಗಳಿಂದ ಹೆಚ್ಚು ಪ್ರಭಾವಿತರಾಗುತ್ತಿದ್ದಾರೆ ಎಂಬ ವಾದ ಕೇಳಿಬರುತ್ತಿದ್ದು, ಈ ನಿಟ್ಟಿನಲ್ಲಿ ಸ್ಟಿಕ್ಟ್ ರೂಲ್ಸ್ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.

ಪೋಷಕರದ್ದೆ ತಪ್ಪು..!
ಪೋಷಕರೇ ಫೇಸ್‌ಬುಕ್ ವೀಡಿಯೋ, ಇನ್‌ಸ್ಟ್ರಾ ರೀಲ್ಸ್ ಗಳಲ್ಲಿ ತಮ್ಮೊಟ್ಟಿಗೆ ಮಕ್ಕಳನ್ನೂ ಸೇರಿಸಿಕೊಂಡು ವೀಡಿಯೋ ಮಾಡುತ್ತಿದ್ದಾರೆ. ತಮ್ಮೊಟ್ಟಿಗೆ ಮಕ್ಕಳಿಗೂ ಅದರ ಗೀಳು ಅಂಟಿಸುತ್ತಿದ್ದಾರೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಮಕ್ಕಳ ಮೇಲೆ ದುಷ್ಪರಿಣಾಮ..!
ಅಂಕಿ ಅಂಶಗಳ ಪ್ರಕಾರ ಪ್ರಪಂಚದಲ್ಲಿ 8-12 ವರ್ಷ ವಯಸ್ಸಿನ 38% ಮಕ್ಕಳು ಮತ್ತು ಹದಿಹರೆಯದವರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಂದಿ ಪ್ರತಿದಿನ ಟಿಕ್‌ಟಾಕ್ ಮತ್ತು 'ಇನ್‌ಸ್ಟ್ರಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಾರೆ. ಇದು ಆಗಾಗ್ಗೆ ಆತಂಕ, ಖಿನ್ನತೆ ಮತ್ತು ನಿದ್ರೆ ಕೊರತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ಗೊತ್ತಾಗಿದೆ.

ಆಸ್ಟ್ರೇಲಿಯಾದಲ್ಲಿ ನಿಷೇಧ..!ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಗೆ ನಿಷೇಧ ಹೇರಿದೆ. ಇನ್ನೂ ಹಲವು ದೇಶಗಳು ಈ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ತರಲು ಕ್ರಮಕೈಗೊಂಡಿವೆ. ಇದೆ ನಿಟ್ಟಿನಲ್ಲಿ ಭಾರತ ಕೂಡ ಹೊಸ ಹೆಜ್ಜೆ ಇಡೋಕೆ ಮುಂದಾಗಿದೆ.
ಫ್ರಾನ್ಸ್‌ ನ ಕೆಳಮನೆಯ ಸಂಸದರು 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಸೂದೆಯನ್ನು ಅನುಮೋದಿಸಿದ್ದಾರೆ. ಆದ್ರೆ ಇದು ಇನ್ನೂ ಸೆನೆಟ್‌ನಲ್ಲಿ ಇದು ಇನ್ನೂ ಸೆನೆಟ್‌ನಲ್ಲಿ ಅಂಗೀಕಾರವಾಗಬೇಕಾಗಿದೆ. ಯುಕೆ ಕೂಡ ನಿಷೇಧ ಹೇರುವ ಕುರಿಟು ಚಿಂತನೆ ನಡೆಸಿದೆ. ಹೀಗಾಗಿ ಭಾರತದಲ್ಲೂ ಹಲವು ರಾಜ್ಯಗಳಲ್ಲಿ ನಿಷೇಧದ ಬಗ್ಗೆ ಪ್ರಸ್ತಾಪಿಸಲಾಗಿದೆ. ಮಕ್ಕಳು ಸಾಮಾಜಿಕ ಮಾಧ್ಯಮದ ನಿರಂತರ ಬಳಕೆಗೆ ಜಾರುತ್ತಿದ್ದಾರೆ. ಇದು ಅವರ ಗಮನ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.