2026-06-08 01:32:31

sisters exchange their husbends | ಗಂಡಂದಿರನ್ನು ಬದಲಿಸಿಕೊಂಡ ಸಹೋದರಿಯರು: ಮ.ಪ್ರ.ದಲ್ಲಿ ಅಪರೂಪದ ಪ್ರಕರಣ | Speed News Kannada

sisters exchange their husbends  | ಗಂಡಂದಿರನ್ನು ಬದಲಿಸಿಕೊಂಡ ಸಹೋದರಿಯರು: ಮ.ಪ್ರ.ದಲ್ಲಿ ಅಪರೂಪದ ಪ್ರಕರಣ | Speed News Kannada

ಭೋಪಾಲ್: ತಮ್ಮ ಗಂಡಂದಿರನ್ನು ಬದಲಿಸುವಂತೆ ಇಬ್ಬರು ಸಹೋದರಿಯರು ನ್ಯಾಯಾಲಯದ ಮೆಟ್ಟಿಲು ಹತ್ತಿರುವ ವಿಲಕ್ಷಣ ಪ್ರಕರಣ ಮಧ್ಯ ಪ್ರದೇಶದದಲ್ಲಿ ಕೇಳಿಬಂದಿದೆ. ಗ್ವಾಲಿಯರ್ ನ ಇಬ್ಬರು ಸಹೋದರಿಯರು ತಮ್ಮ ಗಂಡಂದಿರನ್ನು ಪರಸ್ಪರ ಬದಲಾಯಿಸಿಕೊಳ್ಳಲು ಅನುಮತಿ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅಕ್ಕತಂಗಿಯರಿಗೆ ಮಕ್ಕಳೂ ಇದ್ದಾರೆ. ಅಕ್ಕ ತನ್ನ ತಂಗಿಯ ಪತಿಯೊಂದಿಗೆ ಜೀವನ ನಡೆಸಲು ನಿರ್ಧರಿಸಿದ್ದರೆ ತಂಗಿ ತನ್ನ ಅಕ್ಕನ ಗಂಡನೊಂದಿಗೆ ಬದುಕುವುದಾಗಿ ತಿಳಿಸಿದ್ದಾಳೆ.  

ತಾನು ತಂಗಿಯ ಗಂಡನ ಜತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅಕ್ಕ ವಾದಿಸಿದ್ದಾಳೆ. ಅಕ್ಕನ ವಾದವನ್ನು ಪ್ರತಿಭಟಿಸುವ ಬದಲು ತಂಗಿಯು  ತಾನೂ ಕೂಡ ಅಕ್ಕನ ಗಂಡನ ಜೊತೆ ಜೀವನ ನಡೆಸುವುದಾಗಿ ಮನವಿ ಮಾಡಿಕೊಂಡಿದ್ದಾಳೆ.  ಇವರ ವಾದ ಸರಣಿಗೆ ನ್ಯAೈಮೂರ್ತಿಗಳೂ ಸೇರಿದಂತೆ ಇಡೀ ನ್ಯಾಯಾಲಯ ಬೇಸ್ತು ಬಿದ್ದಿದೆ.

ಮಾಯಾರಾಮ್ ಎಂಬಾತ ತನ್ನ ಪತ್ನಿ ಮತ್ತು ಮಗಳನ್ನು ಅಪಹರಿಸಲಾಗಿದೆ ಎಂದು ಗ್ವಾಲಿಯರ್ ನ ಗಿರಿಜಾ ಶಂಕರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಸತ್ಯ ಹೊರಬಿದ್ದಿದೆ.

ನನ್ನನ್ನು ಅಪಹರಿಸಿಲ್ಲ. ನಾನು ನನ್ನ ಸ್ವಂತ ಇಚ್ಛೆಯಿಂದ ನನ್ನ ಸೋದರ ಮಾವ ಅಂದರೆ ಮಾಯಾರಾಮ್ ಜೊತೆ ಬದುಕುತ್ತಿದ್ದೇನೆ ಎಂದು ಮಹಿಳೆಯು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಈಕೆಯ ವಾದಕ್ಕೆ ಸಹೋದರಿಯು ಆಕೆಗೆ ನನ್ನ ಪತಿ ಬೇಕು ಎಂದರೆ ನನಗೆ ಆಕೆಯ ಪತಿ ಬೇಕು ಎಂದು ವಾದಿಸಿದ್ದಾರೆ. ಅಂದರೆ ತಂಗಿಯ ಪತಿಯನ್ನೇ ವಿವಾಹವಾಗಲು ಬಯಸಿದ್ದಾರೆ.

ನನ್ನ ಸಹೋದರಿ ನನ್ನ ಪತಿಯೊಂದಿಗೆ ವಾಸಿಸಲು ಬಯಸಿದರೆ, ನನಗೆ ಯಾವುದೇ ಅಭ್ಯಂತರವಿಲ್ಲ. ನಾನು ಕೂಡ ನನ್ನ ಸೋದರ ಮಾವ (ತಂಗಿಯ ಗಂಡ) ಜೊತೆ ವಾಸಿಸಲು ಬಯಸುತ್ತೇನೆ ಎಂದು ನ್ಯಾಯಾಲಯದ ಗಮಮನಕ್ಕೆ ತಂದಿದ್ದಾರೆ.

ನ್ಯಾಯಮೂರ್ತಿಗಳೇ ಸುಸ್ತು:

ಅಕ್ಕತಂಗಿಯರ ವಾದ ವಿಲಕ್ಷಣ ಬೇಡಿಕೆಯನ್ನು ಕಂಡು ನ್ಯಾಯಾದೀಶರೂ ಬೇಸ್ತು ಬಿದ್ದಿದ್ದಾರೆ. ಇವರು ವಯಸ್ಕರಾಗಿರುವುದರಿಂದ ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರಾಗಿದ್ದಾರೆ.  ಈ ವಿಷಯದಲ್ಲಿ ಕಾನೂನು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.