2026-06-08 02:24:57

Silicon Valley residents suffer from the scorching summer sun | ಬೇಸಿಗೆಯ ಬಿರು ಬಿಸಿಲಿಗೆ ಹೈರಾಣದ ಸಿಲಿಕಾನ್‌ ಮಂದಿ | Speed news kannada

Silicon Valley residents suffer from the scorching summer sun | ಬೇಸಿಗೆಯ ಬಿರು ಬಿಸಿಲಿಗೆ ಹೈರಾಣದ ಸಿಲಿಕಾನ್‌ ಮಂದಿ | Speed news kannada

ಬೇಸಿಗೆಯ ಬರುತ್ತಿದ್ದಂತೆ ಬೀಸಿಲ ಬೆಗೆಗೆ ಬೆಂಗಳೂರಿನ ಮಂದಿ ತತ್ತರಿಸಿಹೋಗಿದ್ದಾರೆ. ದಿನದಿಂದ ತಾಪಮಾನದಲ್ಲಿ ಬದಲಾವಣೆಯಾಗುತ್ತಿದ್ದು, ಬೇಸಿಗೆಯ ಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರವೂ ತೀವ್ರ ಬಿಸಿಲಿನ ತಾಪ ಮುಂದುವರಿದು, ಗರಿಷ್ಠ ತಾಪಮಾನ ಸುಮಾರು 36.5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಯಿತು. ಇದು ಏಪ್ರಿಲ್ ಮಧ್ಯಭಾಗದ ಸಾಮಾನ್ಯ ಮಟ್ಟಕ್ಕಿಂತ ಸುಮಾರು 2.3 ಡಿಗ್ರಿ ಹೆಚ್ಚಾಗಿದೆ. ಇನ್ನೂ ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ನಾಲ್ಕು ದಿನಗಳವರೆಗೆ ಬೆಂಗಳೂರು ಸುತ್ತಮುತ್ತ ಶುಭ್ರ ಆಕಾಶ ಮತ್ತು ಉಷ್ಣಾಂಶ ಹೆಚ್ಚಾಗಿಯೇ ಇರುತ್ತದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ತಾಪಮಾನವು 36 ರಿಂದ 37 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ರಾಜ್ಯದ ಕರಾವಳಿ ಹಾಗೂ ಉತ್ತರ ಭಾಗಗಳಲ್ಲಿ ತಾಪಮಾನವು 40 ರಿಂದ 42 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹೇಳಿದರು. ಇನ್ನೂ ಹೆಚ್ಚಾದ ತಾಪಮಾನದಿಂದ ಜನ ಆದಷ್ಟು ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ತಿಳಿಸಿದ್ದು, ಆದಷ್ಟು ಹೆಚ್ಚಾಗಿ ನೀರು ಕುಡಿಯುವುದು ಹಾಗೂ ಆದಷ್ಟು ತರಕಾರಿ ಹಾಗೂ ಕಾರಯುತ ಪದಾರ್ಥಗಳನ್ನು ಕಮ್ಮಿ ಮಾಡುವುದು ಸಲಹೆ ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.