2026-09-06 03:36:26

Silicon City is bustling, AC, clay pots are in full demand|ಸಿಲಿಕಾನ್ ಸಿಟಿ ಧಗಧಗ, ಎಸಿ, ಮಣ್ಣಿನ ಮಡಕೆಗೆ ಫುಲ್‌ ಡಿಮ್ಯಾಂಡ್‌|Speed News Kannada

Silicon City is bustling, AC, clay pots are in full demand|ಸಿಲಿಕಾನ್ ಸಿಟಿ ಧಗಧಗ, ಎಸಿ, ಮಣ್ಣಿನ ಮಡಕೆಗೆ ಫುಲ್‌ ಡಿಮ್ಯಾಂಡ್‌|Speed News Kannada

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ತತ್ತರಿಸಿದೆ. ಸೆಕೆಯಿಂದ ಪಾರಾಗಲು ನಗರದ ಜನರು ಇದೀಗ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ.ನಗರದ ಎಲೆಕ್ಟ್ರಾನಿಕ್ ಶೋರೂಮ್‌ಗಳಲ್ಲಿ ಎಸಿ ಮತ್ತು ಕೂಲರ್‌ಗಳಿಗೆ ಹಿಂದೆಂದೂ ಕಾಣದ ಬೇಡಿಕೆ ಸೃಷ್ಟಿಯಾಗಿದೆ. ಅತಿಯಾದ ಬೇಡಿಕೆಯಿಂದಾಗಿ ಸ್ಟಾಕ್ ಖಾಲಿಯಾಗಿದ್ದು, ಹೊಸ ಉಪಕರಣಗಳಿಗಾಗಿ ಗ್ರಾಹಕರು ವಾರಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆಡೆ ಆಧುನಿಕ ಕೂಲರ್‌ಗಳ ಭರಾಟೆಯಾದರೆ, ಮತ್ತೊಂದೆಡೆ ಆರೋಗ್ಯದ ದೃಷ್ಟಿಯಿಂದ 'ಬಡವರ ಫ್ರಿಡ್ಜ್' ಎಂದೇ ಖ್ಯಾತಿಯಾಗಿರುವ ಮಣ್ಣಿನ ಮಡಿಕೆ, ಜಗ್ಗುಗಳು ಮತ್ತು ಬಾಟಲಿಗಳಿಗೆ ಭಾರೀ ಬೇಡಿಕೆ ಬಂದಿದೆ. ಪರಿಸರ ಸ್ನೇಹಿಯಾಗಿರುವ ಈ ಮಣ್ಣಿನ ಉತ್ಪನ್ನಗಳ ಮಾರಾಟದಿಂದ ಕುಂಬಾರರು ಮತ್ತು ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.