2026-06-08 03:53:44

Siddaramaiahs Budget Record | ಸಿದ್ದರಾಮಯ್ಯ ಬಜೆಟ್‌ ದಾಖಲೆ ಗೆ ಮೈಸೂರಿನಲಿ ಚಿತ್ರದ ಹಾರೈಕೆ | Speed News Kannada

Siddaramaiahs Budget Record | ಸಿದ್ದರಾಮಯ್ಯ ಬಜೆಟ್‌ ದಾಖಲೆ ಗೆ ಮೈಸೂರಿನಲಿ ಚಿತ್ರದ ಹಾರೈಕೆ | Speed News Kannada

ಮೈಸೂರು: ದಾಖಲೆಯ 17ನೇ ಬಜೆಟ್ ಮಂಡನೆಗೆ ಸಿದ್ದವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರಿನಲ್ಲಿ, ಅವರ ದೊಡ್ಡ ಚಿತ್ರಬಿಡಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
ಕೆಎಸ್‌ಐಸಿ ಮುಚ್ಚುವ ಪ್ರಶ್ನೆಯೇ ಇಲ್ಲ: ಯತೀಂದ್ರ ಸಿದ್ದರಾಮಯ್ಯ ಇಲ್ಲಿನ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 8,125 ಚದರ ಅಡಿಯ ಚಿತ್ರವನ್ನು ಕಲಾವಿದರಿಂದ ಬಿಡಿಸಲಾಗಿದೆ. ಕನ್ನಡ ಬಾವುಟದ ಬಣ್ಣದಿಂದ ಸಿದ್ಧಪಡಿಸಿದ ರಾಜ್ಯದ ನಕ್ಷೆಯ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರು ಬಜೆಟ್ ಪುಸ್ತಕದ ಬೀಫ್‌ಕೇಸ್ ಹಿಡಿದು ನಿಂತಿರುವಂತೆ ಚಿತ್ರ ಬಿಡಿಸಿ ಗಮನಸೆಳೆಯಲಾಗಿದೆ. ಈ ಚಿತ್ರವನ್ನು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಅನಾವರಣಗೊಳಿಸಿದರು. ಪಕ್ಷದ ಮುಖಂಡರಾದ ಬಸಪ್ಪ, ಕಂಸಾಳೆ ರವಿ, ಸಂತೋಷ್ ಮಳಿಯೂರು, ಹೇಮಂತ್, ಕೆಂಪರಾಜು ಜೊತೆಗಿದ್ದರು.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.