2026-06-08 01:33:41

ಮತೀಯ, ಫ್ಯೂಡಲ್ ಶಕ್ತಿಗಳ ವಿರುದ್ಧ ಸಿದ್ದರಾಮಯ್ಯ ನಡೆಸಿದ ಹೋರಾಟ ಅವಿಸ್ಮರಣೀಯ: ಡಾ.ಮಹದೇವಪ್ಪ| Speed News Kannada

ಮತೀಯ, ಫ್ಯೂಡಲ್ ಶಕ್ತಿಗಳ ವಿರುದ್ಧ ಸಿದ್ದರಾಮಯ್ಯ ನಡೆಸಿದ ಹೋರಾಟ ಅವಿಸ್ಮರಣೀಯ: ಡಾ.ಮಹದೇವಪ್ಪ| Speed News Kannada

ಬೆಂಗಳೂರು: ಗಣಿ ಧೂಳಿನಿಂದ,ರಾಜಕೀಯ ಅರಾಜಕತೆಯಿಂದ ಅಕ್ಷರಶಃ ನಲುಗಿ ಹೋಗಿದ್ದ ಬಳ್ಳಾರಿಯ ನಾಡಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಅಮೋಘ ಗೆಲುವಿಗೆ ಮುನ್ನುಡಿ ಬರೆದ ಸಿದ್ದರಾಮಯ್ಯನವರು 2013 ರಿಂದ 2018 ವರೆಗೆ ನೀಡಿದ ಆಡಳಿತ ಒಂದು ದೊಡ್ಡ ಇತಿಹಾಸ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಸಿದ್ದರಾಮಯ್ಯ ಅವರ ಹೋರಾಟದ ಹಾದಿಯನ್ನು ಸ್ಮರಿಸಿಕೊಂಡಿದ್ದಾರೆ.

ಮೈಸೂರಿನ ಪುಟ್ಟ ಗ್ರಾಮದಿಂದ ಬಂದು, ರಾಜಕೀಯವಾಗಿ ದೊಡ್ಡ ಮಟ್ಟಕ್ಕೆ ಬೆಳೆದು ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಲು ಎದೆಗಾರಿಕೆಯಿಂದ ಶ್ರಮಿಸಿದ ಸಿದ್ದರಾಮಯ್ಯ ಅಂತಹ ನಾಯಕರು ಕನ್ನಡ ನಾಡಿಗೆ ಅತ್ಯಂತ ಅಪರೂಪ. 40 ವರ್ಷಗಳ ಅವರೊಂದಿಗಿನ ಒಡನಾಟದಲ್ಲಿ ಹಲವು ಏಳು ಬೀಳುಗಳ ನಡುವೆಯೂ ಜನರ ಪ್ರೀತಿ ಮತ್ತು ಬೆಂಬಲದಿಂದ ಎಲ್ಲ ಮತೀಯ ಮತ್ತು ಫ್ಯೂಡಲ್ ಶಕ್ತಿಗಳ ವಿರುದ್ಧ ಗೆದ್ದು ನಿಂತ ಸಿದ್ದರಾಮಯ್ಯನವರ ಎದೆಗಾರಿಕೆಯು ಸಾರ್ವಜನಿಕ ಜೀವನಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಗೂ ಮಾದರಿ ಆಗುವಂತದ್ದು.

ಸಾಮಾನ್ಯ ಮನುಷ್ಯರ ಎಲ್ಲ ಭಾವನೆಗಳ ಹದವಾದ ಮಿಶ್ರಣವಾಗಿ ರೂಪುಗೊಂಡಿದ್ದ ಸಿದ್ದರಾಮಯ್ಯನವರು, ತಮ್ಮ Aggressive nature ಅನ್ನು ಬದಿಗಿಟ್ಟು ಕಳೆದ ಒಂದು ದಶಕದಲ್ಲಿ ರೂಢಿಸಿಕೊಂಡ ಸಮಚಿತ್ತ ಮನಸ್ಸು ಮತ್ತು ಅದರೊಳಗೆ ಇದ್ದ ರಾಜಕೀಯ ನೈಪುಣ್ಯತೆಯ ಕಾರಣವೇ ಅವರ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ಕಾಣುತ್ತದೆ.

ಇಂತಹ ಧೀಮಂತ ನಾಯಕ, ಆಧುನಿಕ ರಾಜಕೀಯ ಸಂದರ್ಭದ ಅರಸು ಎಂದೇ ಕರೆಯಬಹುದಾದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಈ ದಿನ ರಾಜೀನಾಮೆ ಸಲ್ಲಿಸಿದ್ದಾರೆ. ‌ ಜಾತಿ, ಧರ್ಮದ ಬೇಧವಿಲ್ಲದೇ ಎಲ್ಲರಿಗೂ ಒಳ್ಳೆಯದನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ ಸಿದ್ದರಾಮಯ್ಯನವರಿಗೆ ಒಳ್ಳೆಯದೇ ಆಗಲಿ ಎಂದು ಮನದುಂಬಿ ಆಶಿಸುತ್ತೇನೆ ಎಂದು ಮಹದೇವಪ್ಪ ಹೇಳಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.