2026-06-08 01:25:58

Siddaramaiah campaigns in Kerala election hotbed Manjeshwara|ಕೇರಳ ಚುನಾವಣಾ ಕಾವು ಮಂಜೇಶ್ವರದಲ್ಲಿ ಸಿದ್ದರಾಮಯ್ಯ ಪ್ರಚಾರ|Speed News Kannada

Siddaramaiah campaigns in Kerala election hotbed Manjeshwara|ಕೇರಳ ಚುನಾವಣಾ ಕಾವು ಮಂಜೇಶ್ವರದಲ್ಲಿ ಸಿದ್ದರಾಮಯ್ಯ ಪ್ರಚಾರ|Speed News Kannada

ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕಾಸರಗೋಡ ಸಮೀಪದ ಮಂಜೇಶ್ವರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕನ್ನಡಿಗರ ಪ್ರಾಬಲ್ಯವಿರುವ ಈ ಗಡಿ ಪ್ರದೇಶದಲ್ಲಿ ಸಿಎಂ ಜನತೆಯನ್ನುದ್ದೇಶಿಸಿ ಮಾತನಾಡಿ ತಮ್ಮ ಪಕ್ಷದ ಬೆಂಬಲ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಸಿದ್ಧರಾಮಯ್ಯ ಇಂದು ಸಂಜೆ 4 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ನೇರವಾಗಿ ಮಂಜೇಶ್ವರಕ್ಕೆ ತೆರಳುತ್ತಾರೆ. ಮೊದಲು ಸಂಜೆ 5 ಗಂಟೆಗೆ ವೊರ್ಕಾಡಿ ಗ್ರಾಮದಲ್ಲಿ ಪ್ರಚಾರ, ನಂತರ 6.30ಕ್ಕೆ ಮುಲ್ಲೇರಿಯಾದಲ್ಲಿ ರ‍್ಯಾಲಿ ನಡೆಸಿ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿದ್ದು, ಹಾಲಿ ಶಾಸಕ ಎಕೆಎಂ ಅಶ್ರಫ್ ಮರು ಆಯ್ಕೆಗೆ ಸ್ಪರ್ಧಿಸುತ್ತಿದ್ದಾರೆ. ವಿರುದ್ಧವಾಗಿ, ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಸಹ ಗೆಲುವಿಗಾಗಿ ತೀವ್ರ ಹೋರಾಟ ನಡೆಸುತ್ತಿದ್ದಾರೆ ಕಾಂಗ್ರೆಸ್ ಪರ ಅಶೋಕ್ ಕುಮಾರ್ ರೈ ಅವರು, “ಧರ್ಮ ಆಧಾರಿತ ಮತವೇಳಿಕೆಯನ್ನು ಬಿಟ್ಟು ಸಾಧನೆ ಆಧಾರದ ಮೇಲೆ ಮತ ಕೇಳಬೇಕು” ಎಂದು ಸವಾಲು ಹಾಕಿದ್ದಾರೆ. ಡಿ ವೇದವ್ಯಾಸ ಕಾಮತ್ ಅವರು, “ಕೇರಳದಲ್ಲಿ ಎನ್‌ಡಿಎ ಸರ್ಕಾರ ಅಗತ್ಯ, ಜನರು ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ” ಎಂದು ಹೇಳಿ, ಪ್ರಸ್ತುತ ಆಡಳಿತದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಮಂಜೇಶ್ವರ ಕ್ಷೇತ್ರವು ಪಕ್ಷಗಳಿಗೆ ರಾಜಕೀಯ ಪ್ರಮುಖ ಕಣವಾಗಿ ಪರಿಗಣಿಸಲಾಗಿದೆ, ಮತ್ತು ಪ್ರಚಾರವು ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ.

 

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.