2026-06-08 02:18:13

Siddaramaiah arrives at actor Dushyants reception | ನಟ ದುಷ್ಯಂತ್‌ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ | Speed News Kannada

Siddaramaiah arrives at actor Dushyants reception | ನಟ ದುಷ್ಯಂತ್‌ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ | Speed News Kannada

ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಆರತಕ್ಷತೆ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಅವರ ಆಗಮನದಿಂದ ದುಷ್ಯಂತ್ ಮತ್ತು ರಚನಾ ಖುಷಿಯಾಗಿದ್ದಾರೆ. ಬಹಳ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೇ ಡಿಕೆ ಸುರೇಶ್, ಆರ್. ಅಶೋಕ ಮುಂತಾದ ಗಣ್ಯರು ಆರಕ್ಷತೆಗೆ ಬಂದು ಶುಭಕೋರಿದ್ದಾರೆ. ದುಷ್ಯಂತ್ ಅವರು ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪುತ್ರ. ಹಾಗಾಗಿ ರಾಜಕೀಯ ಕ್ಷೇತ್ರದ ಹಲವರು ಈ ಮದುವೆಗೆ ಹಾಜರಿ ಹಾಕಿದ್ದಾರೆ. ಫೋಟೋಗಳು ವೈರಲ್ ಆಗಿವೆ. 'ಗತ ವೈಭವ' ಸಿನಿಮಾದ ಮೂಲಕ ದುಷ್ಯಂತ್ ಅವರು ಗುರುತಿಸಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಆ ಸಿನಿಮಾ 2025ರಲ್ಲಿ ಬಿಡುಗಡೆ ಆಗಿತ್ತು. ಬಳಿಕ ಒಟಿಟಿಯಲ್ಲೂ ಮೆಚ್ಚುಗೆ ಪಡೆಯಿತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.