2026-06-08 03:55:11

Ship and aircraft tracking without GPS off|ಜಿಪಿಎಸ್ ಆಫ್ ಇಲ್ಲದೆ ಹಡಗು ವಿಮಾನ ಪತ್ತೆ| Speed News Kannada

Ship and aircraft tracking without GPS off|ಜಿಪಿಎಸ್ ಆಫ್ ಇಲ್ಲದೆ ಹಡಗು ವಿಮಾನ ಪತ್ತೆ| Speed News Kannada

ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆಯೇ ‘ಡಾರ್ಕ್ ಶಿಪ್ಪಿಂಗ್’ ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಡಲು ಭಾರತದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.ಮೂಲದ ಸ್ಟಾರ್ಟ್‌ಅಪ್ ಕ್ಸೋವಿಯನ್ ಏರೋಸ್ಪೇಸ್, ಜಿಪಿಎಸ್ ಆಫ್ ಇದ್ದರೂ ಹಡಗು ಮತ್ತು ವಿಮಾನಗಳನ್ನು ಪತ್ತೆಹಚ್ಚುವ ನೂತನ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.ಈ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವು ರೇಡಿಯೋ ಫ್ರೀಕ್ವೆನ್ಸಿ ಸಿಗ್ನಲ್‌ಗಳು ಹಾಗೂ ಎಲೆಕ್ಟ್ರೋಮ್ಯಾಗ್ನೆಟಿಕ್ ಗುರುತುಗಳನ್ನು ವಿಶ್ಲೇಷಿಸಿ, ಜಿಪಿಎಸ್ ಇಲ್ಲದಿದ್ದರೂ ಹಡಗುಗಳ ಹಾಗೂ ವಿಮಾನಗಳ ಸ್ಥಳವನ್ನು ಪತ್ತೆಹಚ್ಚುತ್ತದೆ.ISRO ನಿವೃತ್ತ ವಿಜ್ಞಾನಿಗಳನ್ನೊಳಗೊಂಡ 14 ಸದಸ್ಯರ ತಂಡ, ಎರಡು ವರ್ಷಗಳ ಪರಿಶ್ರಮದ ಬಳಿಕ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.


ಈ ಸಾಧನವು ರಕ್ಷಣಾ ವಲಯ, ವಾಣಿಜ್ಯ ಶಿಪ್ಪಿಂಗ್ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಬಹು ಉಪಯುಕ್ತವಾಗಿದೆ. ಈಗಾಗಲೇ ಪೈಲಟ್ ಯೋಜನೆಗಳು ನಡೆಯುತ್ತಿದ್ದು, ರಕ್ಷಣಾ ಇಲಾಖೆಯೊಂದಿಗೆ ಚರ್ಚೆಗಳು ಮುಂದುವರಿದಿವೆ.ಪ್ರಸ್ತುತ 20 ನಿಮಿಷಗಳ ವಿಳಂಬವಿರುವ ಟ್ರ್ಯಾಕಿಂಗ್ ವ್ಯವಸ್ಥೆಯನ್ನು, ಭವಿಷ್ಯದಲ್ಲಿ ಸ್ವಂತ ಉಪಗ್ರಹ ಉಡಾವಣೆಯ ಮೂಲಕ ಕೆಲವೇ ನಿಮಿಷಗಳಿಗೆ ಇಳಿಸುವ ಯೋಜನೆ ಇದೆ.ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಈ ಅಭಿವೃದ್ಧಿ ಗುರುತಿಸಿಕೊಂಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.