2026-07-23 09:12:12

Severe shortage in Maddur coconut water market|ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ಭೀಕರ ಅಭಾವ|Speed News Kannada

Severe shortage in Maddur coconut water market|ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ಭೀಕರ ಅಭಾವ|Speed News Kannada

ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆಯಾದ ಮದ್ದೂರಿನಲ್ಲಿ ಎಳನೀರಿನ ಪೂರೈಕೆ ಕುಸಿದಿದೆ. ಪ್ರತಿದಿನ ಬರುತ್ತಿದ್ದ 5-6 ಲಕ್ಷ ಎಳನೀರು ಇದೀಗ 1.5 ರಿಂದ 2 ಲಕ್ಷಕ್ಕೆ ಇಳಿಕೆಯಾಗಿದೆ.ತೀವ್ರ ಬೇಸಿಗೆ ಮತ್ತು ನುಸಿ ರೋಗದಿಂದಾಗಿ ಎಳನೀರು ಅಕಾಲಿಕವಾಗಿ ಉದುರುತ್ತಿದ್ದು, ಮಾರುಕಟ್ಟೆಯಲ್ಲಿಯೇ ಒಂದು ಎಳನೀರಿಗೆ ₹50 ರಿಂದ ₹53ರವರೆಗೆ ಬೆಲೆ ತಲುಪಿದೆ. ಸಾರಿಗೆ ವೆಚ್ಚ ಸೇರಿ ಗ್ರಾಹಕರಿಗೆ ಹೊರೆ ಹೆಚ್ಚಾಗಿದೆ.ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದರಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ. ಸುಡುಬಿಸಿಲಿನಲ್ಲಿ ಬಾಯಾರಿಕೆ ತಣಿಸಲು ಎಳನೀರು ಸಿಗದೆ ಜನ ಪರದಾಡುವಂತಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.