2026-06-08 01:26:48

Sarigamapa Little Champs is coming to Zee Kannada | ಜೀ ಕನ್ನಡದಲ್ಲಿ ಬರ್ತಿದೆ ಸರಿಗಮಪ ಲಿಟ್ಲ್ ಚಾಂಪ್ಸ್ ಹೊಸ ಸೀಸನ್‌ | Speed news kannada

Sarigamapa Little Champs is coming to Zee Kannada | ಜೀ ಕನ್ನಡದಲ್ಲಿ ಬರ್ತಿದೆ ಸರಿಗಮಪ ಲಿಟ್ಲ್ ಚಾಂಪ್ಸ್ ಹೊಸ ಸೀಸನ್‌ | Speed news kannada

ಜೀ ಕನ್ನಡದ ವಾಹಿನಿಯಲ್ಲಿ ಒಂದಾದ ಬಳಿಕ ಒಂದು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಲೇ ಇರುತ್ತವೆ. ಇತ್ತೀಚೆಗೆ ‘ಜೋಡಿ ನಂ.1’ ಶೋ ಪ್ರಸಾರ ಆರಂಭಿಸಿದೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಇತ್ತೀಚೆಗೆ ಪೂರ್ಣಗೊಂಡಿದೆ. ಹೀಗಿರುವಾಗಲೇ ಜನರ ಫೇವರಿಟ್ ಶೋ ಎನಿಸಿಕೊಂಡಿರುವ ‘ಸರಿಗಮಪ ಲಿಟ್ಲ್ ಚಾಂಪ್ಸ್’ ಆಗಮನಕ್ಕೆ ಜೀ ಕನ್ನಡ ವೇದಿಕೆ ರೆಡಿ ಮಾಡಿದೆ.

ಈ ಬಾರಿ ಸಣ್ಣ ಮಕ್ಕಳಿಗೆ ಶೋ ವೇದಿಕೆ ಆಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಈ ವರ್ಷ 3 ವರ್ಷದಿಂದ ಆರಂಭಿಸಿ 15 ವರ್ಷದೊಳಗಿನ ಮಕ್ಕಳು ಶೋನಲ್ಲಿ ಭಾಗವಹಿಸಬಹುದು ಎಂಬುದು ಈ ಬಾರಿಯ ವಿಶೇಷ. ಬೆಂಗಳೂರಿನಲ್ಲಿ ಮಾತ್ರ ಆಡಿಷನ್ ಮಾಡಿದರೆ ಕರ್ನಾಟಕದಲ್ಲಿರುವ ಅನೇಕರಿಗೆ ಇದರಲ್ಲಿ ಭಾಗವಹಿಸಲು ಸಾಧ್ಯವಾಗದೆ ಇರಬಹುದು. ಹೀಗಾಗಿ, ಕರ್ನಾಟಕದ ಮೂಲೆ ಮೂಲೆಗೆ ತೆರಳಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.