2026-03-07 04:33:58

SaReGaMaPa Little Champs Audition | ಸರಿಗಮಪ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ ಎಲ್ಲಿ ಯಾವಾಗ? | Speed News Kannada

SaReGaMaPa Little Champs Audition | ಸರಿಗಮಪ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ ಎಲ್ಲಿ ಯಾವಾಗ? | Speed News Kannada

ಕರ್ನಾಟಕ, 11 ಫೆಬ್ರವರಿ 2026: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸ ರಿ ಗ ಮ ಪ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸ ರಿ ಗ ಮ ಪ' ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.ಈ ಬಾರಿಯ ಸ ರಿ ಗ ಮ ಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ ಭಾಗವಹಿಸಬಹುದಾಗಿದೆ. 

ಸ ರಿ ಗ ಮ ಪ Little Champs ಆಡಿಷನ್ ಗಳು ಕರ್ನಾಟಕ 31 ಜಿಲ್ಲೆಗಳಲ್ಲಿ ನಡೆಯಲಿದೆ. ಚೆನ್ನಾಗಿ ಹಾಡುವ ಮಕ್ಕಳು, 3 ರಿಂದ 15 ವರ್ಷದ ಒಳಗಿದ್ದರೆ 3 ವಿಭಿನ್ನವಾದ ಹಾಡುಗಳನ್ನು ಕಲಿತು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ zerox ಕಡ್ಡಾಯ. 

ಆಡಿಷನ್ ನಡೆಯುವ ಸ್ಥಳಗಳು ಮತ್ತು ದಿನಾಂಕಗಳು:
ಫೆಬ್ರವರಿ 14 ಶನಿವಾರದಂದು ಕೊಪ್ಪಳ, ಶಿವಮೊಗ್ಗ, ತುಮಕೂರು, ಫೆಬ್ರವರಿ 15 ಭಾನುವಾರದಂದು ಬಳ್ಳಾರಿ, ಉಡುಪಿ ಮತ್ತು ಬೆಂಗಳೂರು, ಫೆಬ್ರವರಿ 16 ಸೋಮವಾರದಂದು ರಾಯಚೂರು, ಮಂಗಳೂರು, ಫೆಬ್ರವರಿ 17 ಮಂಗಳವಾರದಂದು ಯಾದಗಿರಿ, ಚಿತ್ರದುರ್ಗ ಮತ್ತು ಮಡಿಕೇರಿ, ಫೆಬ್ರವರಿ 18 ಬುಧವಾರದಂದು ಚಿಕ್ಕಮಗಳೂರು, ದಾವಣಗೆರೆ, ಫೆಬ್ರವರಿ 19 ಗುರುವಾರ ಬೀದರ್, ಹಾವೇರಿ, ಫೆಬ್ರವರಿ 20 ಶುಕ್ರವಾರ ಕಲುಬುರಗಿ, ಮಂಡ್ಯ, ಶಿರಸಿ, ಫೆಬ್ರವರಿ 21 ಶನಿವಾರದಂದು ವಿಜಯಪುರ, ಬೆಳಗಾವಿ, ಹಾಸನ, ಫೆಬ್ರವರಿ 22 ಭಾನುವಾರದಂದು ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ, ಫೆಬ್ರವರಿ 23 ಸೋಮವಾರದಂದು ಗದಗ್, ಫೆಬ್ರವರಿ 24 ಮಂಗಳವಾರ ವಿಜಯನಗರ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ, ಫೆಬ್ರವರಿ 25 ಬುಧವಾರದಂದು ರಾಮನಗರ ಮತ್ತು ಕೋಲಾರದಲ್ಲಿ ನಡೆಯಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.