2026-06-08 01:27:04

Sangeeta Sringeri announces new movie | ಹೊಸ ಸಿನಿಮಾ ಘೋಷಿಸಿದ ಸಂಗೀತಾ ಶೃಂಗೇರಿ | Speed news kannada

Sangeeta Sringeri announces new movie | ಹೊಸ ಸಿನಿಮಾ ಘೋಷಿಸಿದ ಸಂಗೀತಾ ಶೃಂಗೇರಿ | Speed news kannada

ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿದ್ದ ಸಂಗೀತಾ ಶೃಂಗೇರಿ ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ಧಾರೆ. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಯಾವುದೇ ಸಿನಿಮಾ ಘೋಷಣೆ ಮಾಡದೇ ಇದ್ದ ಸಂಗೀತಾ ಹೊಸ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ. ಬಿಗ್‌ ಬಾಸ್‌ನ ಸಿಂಹಿಣಿ ಎಂದು ಫೇಮಸ್‌ ಆಗಿರುವ ಸಂಗೀತಾರವರು ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಹೆಸರಿನ ಹೊಸ ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಇಸ್ಮಾಯಿಲ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಸಂಗೀತಾರವರ ಬಿಗ್ ಬಾಸ್ ಬಳಿಕ ಒಪ್ಪಿದ ಮೊದಲ ಸಿನಿಮಾ ಇದಾಗಿದ್ದು. ಇದರ ಮುಹೂರ್ತವನ್ನು  ನೆರವೇರಿಸಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.