2026-06-08 01:19:33

Salman Khans sister restaurant | ಸಲ್ಮಾನ್ ಖಾನ್ ತಂಗಿ ರೆಸ್ಟೋರೆಂಟ್‌ನಲ್ಲಿ ಒಂದೊತ್ತು ಊಟ ಮಾಡಬೇಕಂದ್ರೆ ಪರ್ಸನಲ್‌ ಲೋನ್ ತಗೋಬೇಕು ಮೆನು ನೋಡಿ ಜನ ಶಾಕ್ | Speed News Kannada

Salman Khans sister restaurant | ಸಲ್ಮಾನ್ ಖಾನ್ ತಂಗಿ ರೆಸ್ಟೋರೆಂಟ್‌ನಲ್ಲಿ ಒಂದೊತ್ತು ಊಟ ಮಾಡಬೇಕಂದ್ರೆ ಪರ್ಸನಲ್‌ ಲೋನ್ ತಗೋಬೇಕು ಮೆನು ನೋಡಿ ಜನ ಶಾಕ್ | Speed News Kannada

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಮಾರ್‌ಗಳು ಯಾರು ಇಲ್ಲ.
ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ದಾರೆ. ತಮ್ಮದೇ ವಿಸ್ಕಿ ಬ್ಯಾಂಡ್‌ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿದ್ದಾರೆ. ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕೇವಲ ಕಲಾವಿದರು ಮಾತ್ರ ಅಲ್ಲ. ಅಪ್ಪ, ಅಮ್ಮ, ಅಣ್ಣ, ತಂಗಿ, ಹೀಗೆ ಚಿತ್ರರಂಗದಲ್ಲಿ ಯಾರೋ ಒಬ್ಬರು ದುಡಿದ ದುಡ್ಡಿನಲ್ಲಿ ಅವರ ಮನೆಯ ಸದಸ್ಯರು ಕೂಡ ವ್ಯಾಪಾರಕ್ಕಿಳಿದಿದ್ದಾರೆ. ಹಣ ಸಂಪಾದಿಸುತ್ತಿದ್ದಾರೆ. ಆ ಪೈಕಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಕೂಡ ಒಬ್ಬರು.. ಹೌದು, ಅರ್ಪಿತಾ ಖಾನ್.. ಸಲ್ಮಾನ್ ಖಾನ್ ಮುದ್ದಿನ ತಂಗಿ. ಆಯುಶ್ ಶರ್ಮಾ ಜೊತೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿರುವ ಅರ್ಪಿತಾ ಖಾನ್ ಉದ್ಯಮಿ ಕೂಡ ಹೌದು. ಮುಂಬೈನ ಸಾಂತಾಕ್ರೂಜ್‌ನಲ್ಲಿ ಇವರ ಒಡೆತನದ "ಮೆರ್ಸಿ" ಎಂಬ ಭವ್ಯವಾದ ರೆಸ್ಟೋರೆಂಟ್ ಇದೆ.
ಎರಡು ವರ್ಷದ ಹಿಂದೆ ಉದ್ಘಾಟನೆಯಾದ 9,000 ಚದರ ಅಡಿ ವಿಸ್ತೀಣ ಹೊಂದಿರುವ, ರಾಜಮನೆತನದ ವೈಭವದ ಅನುಭವ ನೀಡುವ ಈ ರೆಸ್ಟೋರೆಂಟ್‌ಗೆ ಬಡ ಮತ್ತು ಮಧ್ಯಮ ವರ್ಗದವರು ಯಾರಾದರೂ ಹೋದರೆ ಅವರ ಜೇಬಿಗೆ ಕತ್ತರಿ ಖಚಿತ. ಯಾಕೆಂದರೆ ಈ ರೆಸ್ಟೋರೆಂಟ್‌ನ ಮೆನ್ಯೂ ಹಾಗಿದೆ. ಸದ್ಯ ಈ ರೆಸ್ಟೋರೆಂಟ್‌ನ ಮೆನ್ಯೂ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆದ ಮೆನ್ಯೂ ಕಾರ್ಡ್ ಪ್ರಕಾರ ಅರ್ಪಿತಾ ಖಾನ್ ಅವರ "ಮೆರ್ಸಿ"ಯಲ್ಲಿ ಯುರೋಪಿಯನ್ ಪಾಸ್ತಾದ ಬೆಲೆ ₹5000 ರೂಪಾಯಿ ಇದೆ. ಇನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಇಲ್ಲಿನ ಟ್ರಫಲ್ ಪಾಸ್ತಾ ಆನ್ ವೀಲ್‌ಗೆ ₹8,500 ರೂಪಾಯಿ ಕೊಡಬೇಕು. ಇಂತಹ ಪಾಸ್ತಾಗಳು ಸಾಮಾನ್ಯವಾಗಿ ಬೇರೆ ರೆಸ್ಟೋರೆಂಟ್‌ಗಳಲ್ಲಿ ₹500 ರಿಂದ ₹1,200 ರೊಳಗೆ ದೊರೆಯುತ್ತವೆ. ಆದರೆ "ಮೆರ್ಸಿ"ಯಲ್ಲಿ ಮಾತ್ರ ದರ ಕೇಳುವಂತೆ ಇಲ್ಲ. ಇನ್ನು ಕುರಿ ಮಾಂಸದಿಂದ ಇಲ್ಲೊಂದು ಖಾದ್ಯ ಮಾಡಲಾಗುತ್ತೆ. ಅದರ ಹೆಸರು "ಲ್ಯಾಂಬ್ ಲೋಯಿನ್". ಇದರ ಬೆಲೆ ಬರೋಬ್ಬರಿ ₹10,000. ಇದಿಷ್ಟೇ ಅಲ್ಲ ಕುರಿಯ ಬೆನ್ನಿನ ಮೃದುವಾದ ಮಾಂಸದಿಂದ ಮಾಡಲಾಗುವ "ಹರ್ಬ್ ಕ್ರಸ್ಟೆಡ್ ಲ್ಯಾಂಬ್ ಲೋಯಿನ್" ತಿನ್ನಬೇಕು ಅಂದರೂ ನೀವು ₹10,000 ಕೊಡಬೇಕು. ಜಪಾನಿ ಶೈಲಿಯ ಮೀನಿನ ಖಾದ್ಯ "ಟೆರಿಯಾಕಿ ಸಾಲ್ಮನ್" ₹4,000 ರೂಪಾಯಿಗೆ ಬೆಲೆಗೆ ಇಲ್ಲಿ ಲಭ್ಯವಿದೆ.
ಇನ್ನು ಎಣ್ಣೆ ಪ್ರಿಯರು ಇಲ್ಲಿ ಅಪ್ಪಿ ತಪ್ಪಿಯೂ ಕಾಲಿಡಬಾರದು. ಯಾಕೆಂದರೆ, ಒಂದು ಬಾಟಲಿ "ಡೊಮ್ ಪೆರಿಗ್ನಾನ್ ರೋಸ್" ಶಾಂಪೇನ್ ಬೆಲೆ ಇಲ್ಲಿ ಬರೋಬ್ಬರಿ ₹2,00,000. ಸಿಗ್ನೆಚ‌ರ್ ಕಾಕ್‌ಟೇಲ್‌ಗಳ ಬೆಲೆ ಶುರುವಾಗುವುದೇ ₹1,500 ರೂಪಾಯಿಯ ಮೇಲೆ. 30ml/60ml ಪ್ರೀಮಿಯಂ ಎಣ್ಣೆಯ
Ươ ₹2,000 80 ₹5,000 3໖. ಸದ್ಯ ಅರ್ಪಿತಾ ಖಾನ್ ಅವರ ಐಶಾರಾಮಿ ರೆಸ್ಟೋರೆಂಟ್‌ ಮೆನ್ಯೂ ಅದರಲ್ಲಿಯೂ "ಪಾಸ್ತಾ" ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಖುದ್ದು ಸಲ್ಮಾನ್ ಖಾನ್ ಇಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಿದ್ದಾರಾ ಹೇಗೆ..? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಪಾಸ್ತಾವನ್ನು ತಿಂದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಾ..? ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಇದನ್ನು ಆರ್ಡರ್ ಮಾಡಲು ಪರ್ಸನಲ್ ಲೋನ್ ತಗೋಬೇಕು ಎಂದು ಕಾಲೆಳೆಯುತ್ತಿದ್ದಾರೆ. "ಮರ್ಸಿ" ಬದಲು "ನೋ ಮರ್ಸಿ" ಎಂದು ಹೆಸರಿಡಬೇಕಿತ್ತು ಎನ್ನುತ್ತಿದ್ದಾರೆ. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.