2026-03-07 05:46:26

Sadhvi Prem Baisa | Passes Away | ಅಶ್ಲೀಲ ವೈರಲ್ ವಿಡಿಯೋದಿಂದ ನೊಂದಿದ್ದ ಸಾಧ್ವಿ ಪ್ರೇಮ್ ಬಾಯಿಸಾ ನಿಧನ | Speed News Kannada

Sadhvi Prem Baisa | Passes Away | ಅಶ್ಲೀಲ ವೈರಲ್ ವಿಡಿಯೋದಿಂದ ನೊಂದಿದ್ದ ಸಾಧ್ವಿ ಪ್ರೇಮ್ ಬಾಯಿಸಾ ನಿಧನ | Speed News Kannada

ಅಶ್ಲೀಲ ವೈರಲ್ ವಿಡಿಯೋದಿಂದ ನೊಂದಿದ್ದ ಸಾಧ್ವಿ ಪ್ರೇಮ್ ಬಾಯಿಸಾ ಇಂದು ನಿಧನಹೊಂದಿದ್ದಾರೆ. ರಾಜಸ್ಥಾನದ ಖ್ಯಾತ ಧಾರ್ಮಿಕ ಕಥೆಗಾರ್ತಿ ಸಾಧ್ವಿ ಪ್ರೇಮ್ ಬೈಸಾ ಕುರಿತು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಜ್ವರದಿಂದಾಗಿ ಅವರನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿತು. ಆದರೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅದೇ ದಿನ ಅವರು ನಿಧನರಾಗಿದ್ದಾರೆ. ಈ ಸುದ್ದಿಯನ್ನು ಕೇಳಿದ ಅವರ ಭಕ್ತರು ಮತ್ತು ಅನುಯಾಯಿಗಳು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಅವರ ಮರಣದ ಕೆಲವು ಗಂಟೆಗಳ ನಂತರ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಿತು. ಅದರಲ್ಲಿ "ಅಗ್ನಿ ಪರೀಕ್ಷೆ," "ನ್ಯಾಯಕ್ಕಾಗಿ ಬೇಡಿಕೆ," ಮತ್ತು "ವಿದಾಯ" ಮುಂತಾದ ಪದಗಳು ಸೇರಿದ್ದು ಇದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಇದು ಆತ್ಮ*ಹತ್ಯೆನೊ ಅಥವಾ ಪಿತೂರಿಯೋ ಎಂದು ಹಲವರು ಪ್ರಶ್ನಿಸಿದ್ದಾರೆ. ಸದ್ಯ ಈ ಪೋಸ್ಟ್ ವಿವಾದವನ್ನು ಮತ್ತಷ್ಟು ಸೃಷ್ಟಿಸಿದೆ. ಸಾಧ್ವಿ ಪ್ರೇಮ್ ಬೈಸ್ ಅವರು ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಮನ ನೊಂದು ಆತ್ಮ ಹತ್ಯೆ ಮಾಡಕೊಂಡಿದ್ದಾರ ಎನ್ನುವ ಪ್ರಶ್ನೆಗಳು ಮೂಡಿದ್ದು ಪ್ರೇಮ್ ಬೈಸಾ ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ ಇಲ್ಲಾ ಆತ್ಮ*ಹತ್ಯೆಯೋ ಅಥವಾ ಪಿತೂರಿನೋ ಇದರಬಗ್ಗೆ ಸತ್ಯವನ್ನು ಬಹಿರಂಗಪಡಿಸಲು ಉನ್ನತ ಮಟ್ಟದ ಪೊಲೀಸ್ ತನಿಖೆ ಮಾಡ್ತಾರ ಕಾದುನೊಡಬೇಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.