2026-06-08 04:37:20

Rs 4000 Crore Announced To Support Industries | ಕೈಗಾರಿಕೋದ್ಯಮಗಳ ಬೆಂಬಲಕ್ಕೆ 4000 ಕೋಟಿ ರೂ. ಘೋಷಣೆ | Speed News Kannada

Rs 4000 Crore Announced To Support Industries | ಕೈಗಾರಿಕೋದ್ಯಮಗಳ ಬೆಂಬಲಕ್ಕೆ 4000 ಕೋಟಿ ರೂ. ಘೋಷಣೆ | Speed News Kannada

2026-27ರ ಬಜೆಟ್‌ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಐದು ಉಪ-ಭಾಗಗಳೊಂದಿಗೆ ಸಂಯೋಜಿತ ಜವಳಿ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಇದು ಅಮೆರಿಕ ವಿಧಿಸಿರುವ ಶೇಕಡಾ 50ರಷ್ಟು ಸುಂಕಗಳಿಂದಾಗಿ ಸವಾಲುಗಳನ್ನು ಎದುರಿಸುತ್ತಿರುವ ವಲಯಕ್ಕೆ ಸಹಾಯ ಮಾಡಬಹುದಾದ ಒಂದು ಕ್ರಮವಾಗಿದೆ ಎಂದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳನ್ನು (MSME) ಬೆಂಬಲಿಸಲು 2026-27ರಲ್ಲಿ ಸ್ವಾವಲಂಬಿ ಭಾರತ ನಿಧಿಗೆ 4,000 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 

ದೊಡ್ಡ ಘಟಕಗಳಾಗಿ ಬೆಳೆಯುವ ಸಾಮರ್ಥ್ಯ ಮತ್ತು ಕಾರ್ಯಸಾಧ್ಯತೆಯನ್ನು ಹೊಂದಿರುವ MSME ಗಳಿಗೆ 50,000 ಕೋಟಿ ರೂಪಾಯಿ ಆರ್ಥಿಕ ಧನ ಸಹಾಯ ನೀಡಲು ಈ ನಿಧಿಯನ್ನು 2023 ರಲ್ಲಿ ಘೋಷಿಸಲಾಗಿತ್ತು.  ನೈಸರ್ಗಿಕ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. 

ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಿಂದ MSME ಗಳಿಂದ ಎಲ್ಲಾ ಖರೀದಿಗಳಿಗೆ ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ (TReDS)ನ್ನು ವಹಿವಾಟು ವೇದಿಕೆಗಳಾಗಿ ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ. ವ್ಯಾಪಾರ ಸ್ವೀಕೃತಿ ರಿಯಾಯಿತಿ ವ್ಯವಸ್ಥೆ ವೇದಿಕೆ - ರಿಸೀವಬಲ್ಸ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (RXIL) - ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಮತ್ತು ರಾಷ್ಟ್ರೀಯ ಷೇರು ವಿನಿಮಯ(NSE) ದಿಂದ ಉತ್ತೇಜಿಸಲ್ಪಟ್ಟ ಜಂಟಿ ಉದ್ಯಮವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.