2026-06-08 02:39:34

Royals challenge Mumbai | ಮುಂಬೈಗೆ ರಾಯಲ್ಸ್ ಸವಾಲು | Speed news kannada

Royals challenge Mumbai | ಮುಂಬೈಗೆ ರಾಯಲ್ಸ್ ಸವಾಲು | Speed news kannada

ಐಪಿಎಲ್‌ 2026ರ ಮ್ಯಾಚ್‌ ನಂ.13ರಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಮುಖಾಮಖಿಯಾಗಲಿವೆ. ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಹಾಗೂ ಐಪಿಎಲ್‌ ಮೊದಲ ಆವೃತ್ತಿಯ ಚಾಂಪಿಯನ್ಸ್‌ ರಾಜಸ್ಥಾನ ರಾಯಲ್ಸ್‌ ನಡುವಿನ ಈ ಕಾಳಗ ಗುಹಾಹಟಿಯ ಬರಸಾಪುರ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳು ಕೂಡಾ ಇನ್ನೊಂದು ಪ್ರಶಸ್ತಿಯನ್ನು ಎದುರು ನೋಡ್ತಾ ಇದ್ರೆ, ಈ ಬಾರಿಯ ಐಪಿಎಲ್‌ ರೇಸ್‌ ಭಾರೀ ಕುತೂಹಲ ಮೂಡಿಸಿದೆ. 
ಎಂಐ ಹಾಗೂ ಆರ್‌ಆರ್‌ ಇದುವರೆಗೂ ಐಪಿಎಲ್‌ನಲ್ಲಿ 31ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಮುಂಬೈ 16ಬಾರಿ ಜಯಗಳಸಿದ್ರೆ, 14ಬಾರಿ ರಾಜಸ್ಥಾನ ಗೆಲುವು ಪಡೆದುಕೊಂಡಿದೆ. ಇನ್ನು 1ಪಂದ್ಯ ಮಳೆಯಿಂದ ರದ್ದಾಗಿದ್ದು ಯಾವುದೇ ಫಲಿತಾಂಶವಿಲ್ಲದ ಪಂದ್ಯವಾಗಿದೆ. 

ಉಭಯ ತಂಡಗಳ ನಡುವಿನ ಕೊನೆಯ 5ಪಂದ್ಯಗಳು: -
1.    ಮೇ 01, 2025  ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಮುಂಬಯ ಇಂಡಿಯನ್ಸ್‌ 2ವಿಕೆಟ್‌ ನಷ್ಟಕ್ಕೆ 217ರನ್‌ ಗಳಿಸಿದ್ರೆ ರಾಜಸ್ಥಾನ್‌ ರಾಯಲ್ಸ್‌  ಕೇವಲ 117ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 100ರನ್‌ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು. 
2.    ಏಪ್ರಿಲ್‌ 1, 2024, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ 126ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ರಾಜಸ್ಥಾನ್‌ 6ವಿಕೆಟ್‌ಗಳ ಸುಲಭ ಜಯ ಗಳಿಸಿತು. 
3.    ಏಪ್ರಿಲ್‌ 30, 2023, ವಾಂಖೆಡೆಯಲ್ಲಿ ನಡೆದ ಮ್ಯಾಚ್‌ನಲ್ಲಿ ರಾಯಲ್ಸ್‌ ನೀಡಿದ 213ರನ್‌ಗಳ ಬೃಹತ್‌ ಮೊತ್ತವನ್ನು ಮುಂಬೈ ಇಂಡಿಯನ್ಸ್‌ ಚೇಸ್‌ ಮಾಡಿ 6ವಿಕೆಟ್‌ಗಳ ಗೆಲುವು ಪಡೆದುಕೊಂಡಿತು. 
4.    ಏಪ್ರಿಲ್‌ 15, 2023,  ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ನೀಡಿದ 178ರನ್‌ಗಳ ಟಾರ್ಗೆಟ್‌ನ್ನು 7ವಿಕೆಟ್‌ ಕಳೆದುಕೊಂಡು ಮುಂಬೈ ಚೇಸ್‌ ಮಾಡಿತ್ತು. 
5.    ಏಪ್ರಿಲ್‌ 30, 2022, ಡಿ.ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 159ರನ್‌ಗಳ ಗುರಿಯನ್ನು 5ವಿಕೆಟ್‌ ಕಳೆದುಕೊಂಡು ತಲುಪಿದ ಮುಂಬೈ ಗೆಲುವಿನ ನಗೆ ಬೀರಿತು. 

ಈ ಅಂಕಿಅಂಶಗಳನ್ನು ಗಮನಿಸಿದ್ರೆ ಕಳೆದ 5ಪಂದ್ಯಗಳಲ್ಲಿ 4-1ರ ಮೂಲಕ, ಮುಂಬೈ ಇಂಡಿಯನ್ಸ್‌ , ರಾಜಸ್ಥಾನ ರಾಯಲ್ಸ್‌ ಮೇಲೆ ಡೊಮಿನೇಟ್‌ ಮಾಡಿರೋದು ಸ್ಪಷ್ಟವಾಗಿ ತಿಳಿಯುತ್ತೆ.  ಇನ್ನು ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ರಾಜಸ್ಥಾನ್‌ ಆಡಿದ ಎರಡು ಪಂದ್ಯಗಳಲ್ಲೂ ಜಯಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ರೆ, ಮುಂಬೈ 1ಗೆಲುವು, 1ಸೋಲು ಕಂಡು 6ನೇ ಸ್ಥಾನದಲ್ಲಿದೆ.  


ನಿರೀಕ್ಷಿತ ಪ್ಲೇಯಿಂಗ್‌ ಇಲೆವೆನ್‌ -  
MI - ರೋಹಿತ್‌ ಶರ್ಮಾ, ರ್ಯಾನ್‌ ರಿಕಲ್ಟನ್‌,  ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌, ನಮನ್‌ ಧೀರ್‌, ಶೇರ್‌ಫೇನ್‌ ರುದರ್‌ಫೋರ್ಡ್, ಹಾರ್ದಿಕ್ ಪಾಂಡ್ಯಾ (C), ಮಿಚೆಲ್‌ ಸ್ಯಾಂಟ್ನರ್‌, ಶಾರ್ದೂಲ್‌ ಠಾಕೂರ್‌, ಟ್ರೆಂಟ್‌ ಬೋಲ್ಟ್‌, ಜಸ್ಪ್ರೀತ್‌ ಬುಮ್ರಾ. 

RR - ಯಶಸ್ವಿ ಜೈಸ್ವಾಲ್‌, ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌, ರಿಯಾನ್‌ ಪರಾಗ್‌,  ಶಿಮ್ರೋನ್‌ ಹೆಟ್‌ಮೈಯರ್‌, ಡೊನೊವನ್‌ ಪೆರಿರಾ, ರವೀಂದ್ರ ಜಡೇಜಾ, ಜೋಪ್ರಾ ಆರ್ಚರ್‌, ನಂದ್ರೆ ಬರ್ಗರ್‌, ತುಷಾರ್‌ ದೇಶಪಾಂಡೆ, ಸಂದೀಪ್‌ ಶರ್ಮಾ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.