2026-06-08 01:24:43

Roll over unused data for reuse: Raghav Chadha | ಬಳಕೆಯಾಗದೆ ಉಳಿದ ಡೆಟಾವನ್ನು ಮರು ಬಳಕೆಗೆ ರೋಲ್‌ ಓವರ್‌ ಮಾಡಿ : ರಾಘವ್‌ ಚಡ್ಡಾ | Speed news kannada

Roll over unused data for reuse: Raghav Chadha | ಬಳಕೆಯಾಗದೆ ಉಳಿದ ಡೆಟಾವನ್ನು ಮರು ಬಳಕೆಗೆ ರೋಲ್‌ ಓವರ್‌ ಮಾಡಿ : ರಾಘವ್‌ ಚಡ್ಡಾ | Speed news kannada

ನಾವು ಪ್ರತಿನಿತ್ಯ ಮೊಬೈಲ್‌ ಫೋನ್‌ಗಳಲ್ಲಿ ಡೆಟಾವನ್ನು ಬಳಸುತ್ತೇವೆ. ಪ್ರತಿದಿನ ಗ್ರಾಹಕರು ಬಳಸಲು ಸೀಮಿತಾ ಡೆಟಾವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ನಾವು 1.5GB, 2GB, 3GB ಎಂಬಂತೆ ಮೊಬೈಲ್‌ ರಿಚಾರ್ಜ್ ಮಾಡಿಕೊಂಡಿರುತ್ತೇವೆ. ಕೆಲವೊಂದು ದಿನ ನಾವು ಕೆಲಸದಿಂದಾಗಿ ಎನೂ ಡೆಟಾ ಬಳಸದೇ ಹಾಗೇ ಇರುತ್ತೇವೆ. ಮರುದಿನ ನಮಗೆ ಹಿಂದಿನ ದಿನದ ಡೆಟಾ ಸಿಗುವುದಿಲ್ಲಾ ಇದರಿಂದಾಗಿ ಟೆಲಿಕಾಂ ಕಂಪನಿಗಳ ವಿರುದ್ದ ಆಮ್‌ ಆದ್ಮ ಪಕ್ಷದ ಸಂಸದ ರಾಘವ್‌ ಚಡ್ಡಾ ಸಂಸತ್‌ ಅಧಿವೇಶನದಲ್ಲಿ ತಮ್ಮ ವಾದವನ್ನು ಮಂಡನೆ ಮಾಡಿದ್ಧಾರೆ.

ನಾವು ಬಳಸದೆ ಉಳಿಯುವ ಇಂಟರ್‌ನೆಟ್‌ ಡೆಟಾವನ್ನು ಕಂಪನಿಗಳು ಹಿಂಪಡೆಯುತ್ತವೆ. ಆದರೆ ನಾವು ಅದಕ್ಕೆ ಹಣವನ್ನು ಸಂಪೂರ್ಣ ಪಾವತಿ ಮಾಡಿ ಇರುತ್ತೇವೆ ಎಂದು ರಾಘವ್‌ ಚಡ್ಡಾ ಆಗ್ರಹಿಸಿದ್ದಾರೆ. ಬಳಕೆಯಾಗದೆ ಉಳಿದ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಅನುಮತಿ ನೀಡಬೇಕು. ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಮಾರನೆ ದಿನ ಉಳಿದ 500 ಎಂಬಿ ಡೆಟಾವನ್ನು ನಮಿಗೆ ಕೊಡಬೇಕು ಎಂದು ರಾಘವ್‌ ಚಡ್ಡಾ ಅವರು ಸಂಸತ್ತಿನ ಅಧಿವೇಶನದಲ್ಲಿ ಧ್ವನಿಯೆತ್ತಿದ್ದಾರೆ.  

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.