2026-03-07 12:19:55

Rishab Shetty expresses appreciation for Yashs Toxic | ಯಶ್ ಟಾಕ್ಸಿಕ್ ಅವತಾರಕ್ಕೆ ಸ್ಯಾಂಡಲ್‌ವುಡ್ ಫಿದಾ ಮೆಚ್ಚುಗೆ ಸೂಚಿಸಿದ ರಿಷಬ್ ಶೆಟ್ಟಿ | Speed News Kannada

Rishab Shetty expresses appreciation for Yashs Toxic | ಯಶ್ ಟಾಕ್ಸಿಕ್ ಅವತಾರಕ್ಕೆ ಸ್ಯಾಂಡಲ್‌ವುಡ್ ಫಿದಾ ಮೆಚ್ಚುಗೆ ಸೂಚಿಸಿದ ರಿಷಬ್ ಶೆಟ್ಟಿ | Speed News Kannada

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸಿದೆ. ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ದಾಟಿದ ಟೀಸರ್, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಎಲ್ಲಿ ನೋಡಿದರೂ ಈಗ 'ಟಾಕ್ಸಿಕ್‌'ದ್ದೇ ಚರ್ಚೆ.ಟೀಸರ್ ನೋಡಿದ ಬಳಿಕ ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಫುಲ್ ಫಿದಾ ಆಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಟೀಸರ್ ನೋಡಿ ಹಾಡಿ ಹೊಗಳಿದ್ದಾರೆ.
"ಇದೊಂದು ಅಸಾಧಾರಣ ಹೆಜ್ಜೆ. ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ ಸಾಹಸಮಯ ಜಾಗತಿಕ ಜರ್ನಿ" ಎಂದು ಭಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟೀಸರ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಪ್ಪ-ಮಗನ ಥೀಮ್ ಸ್ಪಷ್ಟವಾಗುತ್ತದೆ. ಮೊದಲ ಟೀಸರ್‌ನ "ಡ್ಯಾಡಿ ಈಸ್ ಹೋಮ್" ಡೈಲಾಗ್‌ಗೆ ವಿರುದ್ಧವಾಗಿ ಈ ಬಾರಿ "ಡ್ಯಾಡಿ ಆಯಮ್ ಹೋಮ್" ಎಂದು ಹೇಳುವಾಗ ಯಶ್ ಲುಕ್‌ನಲ್ಲಿ ಕಾಣುವ ವ್ಯತ್ಯಾಸ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ರಾಯಲ್ ಸರ್ಕಸ್ ಸೆಟ್‌ಅಪ್ ಕತ್ತಲ ರಾತ್ರಿಯಲ್ಲಿ ಝಗಮಗಿಸುತ್ತಿದ್ದು, ಜೋಕರ್, ಡ್ಯಾನ್ಸರ್, ಆನೆಗಳ ನಡುವೆ ನಡೆಯುವ ರಹಸ್ಯಮಯ ಕೃತ್ಯಗಳ ಫೀಲ್ ಟೀಸರ್‌ಗೆ ವಿಭಿನ್ನ ಮೆರಗು ನೀಡಿದೆ. ಒಟ್ಟಿನಲ್ಲಿ 'ಟಾಕ್ಸಿಕ್' ಮೂಲಕ ಯಶ್ ಮತ್ತೊಮ್ಮೆ ಜಾಗತಿಕ ಮಟ್ಟದ ಅಬ್ಬರಕ್ಕೆ ವೇದಿಕೆ ಸಿದ್ದ ಮಾಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.