2026-07-23 08:48:48

Rise in the price of cooking oil | ಇರಾನ್ ಇಸ್ರೇಲ್ನ ಮಹಾಯುದ್ಧದಿಂದ ಮತ್ತೊಂದು ಎಫೆಕ್ಟ್ ಅಡುಗೆ ಎಣ್ಣೆ ಬೆಲೆ ಏರಿಕೆ | Speed News Kannada

Rise in the price of cooking oil | ಇರಾನ್ ಇಸ್ರೇಲ್ನ ಮಹಾಯುದ್ಧದಿಂದ ಮತ್ತೊಂದು ಎಫೆಕ್ಟ್ ಅಡುಗೆ ಎಣ್ಣೆ ಬೆಲೆ ಏರಿಕೆ | Speed News Kannada

ನವದೆಹಲಿ : ಅಮೆರಿಕ - ಇರಾನ್ - ಇಸ್ರೇಲ್ನ ನಡುವಿನ ಯುದ್ಧದ ಪರಿಣಾಮ ಈಗ ಮಾರುಕಟ್ಟೆ ಮೇಲೆ ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಆದ್ದರಿಂದ ರಾಜ್ಯದಲ್ಲಿ ಅಡುಗೆ ಎಣ್ಣೆ  ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಯಾವುದೇ ಸದ್ದಿಲ್ಲದೆ ಕಳೆದ ಒಂದು ವಾರದಿಂದ ಅಡುಗೆ ಎಣ್ಣೆಯ ಬೆಲೆ ಏರುತ್ತಲೇ ಸಾಗಿದೆ. ಹಿಂದುಗಳ ಯುಗಾದಿ ಹಬ್ಬ ಹಾಗೂ ಮುಸ್ಲಿಮರ ರಂಜಾನ್ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಅಡುಗೆ ಎಣ್ಣೆ ಬೆಲೆಯಲ್ಲಿ ಆಗಿರುವ ಭಾರೀ ಏರಿಕೆ, ಸಾಮಾನ್ಯ ಜನರ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರೋದು ಗ್ಯಾರಂಟಿಯಾಗಿದೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿಗಳವರೆಗೆ ದಿಢೀರ್ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ತೀವ್ರತೆ ಕಡಿಮೆಯಾಗದೇ ಹೋದರೆ, ಮುಂಬರುವ ವಾರದಲ್ಲಿ ಪ್ರತಿ ಲೀಟರ್ ಎಣ್ಣೆ ಮೇಲೆ ಬರೋಬ್ಬರಿ 10 ರಿಂದ 15 ರೂಪಾಯಿಗಳವರೆಗೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರಮುಖ ಬ್ಯಾಂಡ್‌ ಗಳ ಎಣ್ಣೆ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹4 ರಿಂದ ₹5 ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯ ಮೂಲಗಳ ಪ್ರಕಾರ, ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗದಿದ್ದರೆ, ಮುಂದಿನ ವಾರದಲ್ಲಿ ಬೆಲೆಗಳು ಲೀಟರ್‌ಗೆ ಅಂದಾಜು ₹10 ರಿಂದ ₹15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ ವಾರ ಒಂದು ಲೀಟರ್‌ಗೆ 161 ರೂ. ಇತ್ತು, ಈ ವಾರ 165 ರೂ. ಆಗಿದೆ.
ಫಾರ್ಚೂನ್ ಕಳೆದ ವಾರ ಒಂದು ಲೀಟರ್‌ಗೆ 152 ರೂ. ಇತ್ತು, ಈ ವಾರ 157 ರೂ.ಗೆ ತಲುಪಿದೆ.
ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಪ್ರಮುಖ ಬ್ರಾಂಡ್‌ಗಳ ಅಡುಗೆ ಎಣ್ಣೆಗಳ ಮೇಲೂ ಸರಾಸರಿ 4 ರಿಂದ 5 ರೂಪಾಯಿಗಳವರೆಗೆ ದರ ಏರಿಕೆ ಮಾಡಲಾಗಿದೆ. ಯುದ್ಧದ ನೆಪದಲ್ಲಿ ವರ್ತಕರ ಲಾಭಕೋರತನ?
ಬೆಲೆ ಏರಿಕೆಗೆ ಯುದ್ಧವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದ್ದರೂ ವರ್ತಕರ ಮೇಲೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಮಾರುಕಟ್ಟೆಯ ಮಾಹಿತಿ ಪ್ರಕಾರ, ಸದ್ಯ ಗೋದಾಮುಗಳಲ್ಲಿ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ದಾಸ್ತಾನು ಲಭ್ಯವಿದೆ.
ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಿಂದ ತೈಲ ಸರಬರಾಜು ಮಾರ್ಗಗಳು ಅಡಚಣೆಗೊಳಗಾಗಿವೆ. ಭಾರತಕ್ಕೆ ಹೆಚ್ಚಿನ ಅಡುಗೆ ಎಣ್ಣೆ (ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಮುಂತಾದವು) ಉಕ್ರೇನ್, ರಷ್ಯಾ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಯುದ್ಧದ ಕಾರಣದಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ. ಆದ್ದರಿಂದ ಬೆಲೆ ಏರಿಕೆಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.