2026-04-23 11:00:33

Registration for Second PUC Exam-2 open till April 17 | ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ನೋಂದಣಿ ಮಾಡಲು ಏ.17ರ ವರೆಗೆ ಅವಕಾಶ | Speed news kannada

Registration for Second PUC Exam-2 open till April 17 | ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ನೋಂದಣಿ ಮಾಡಲು ಏ.17ರ ವರೆಗೆ ಅವಕಾಶ | Speed news kannada

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಏಪ್ರಿಲ್ 17ರವರೆಗೆ ಅವಕಾಶ ನೀಡಲಾಗಿದೆ. 2026ರಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಅಥವಾ ಫಲಿತಾಂಶ ಪೂರ್ಣಗೊಳಿಸದವರು ಯಾವುದೇ ಶುಲ್ಕವಿಲ್ಲದೆ ನೋಂದಾಯಿಸಿಕೊಳ್ಳಬಹುದು. ಅಭ್ಯರ್ಥಿಗಳು ನಿಗದಿತ ಆನ್‌ಲೈನ್ ಲಿಂಕ್ (http://tinyurl.com/mvp9k6es) ಮೂಲಕ ಅಥವಾ ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಹೆಸರು ದಾಖಲಿಸಬಹುದು. ಮೊದಲ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಪ್ರಾಂಶುಪಾಲರ ಲಾಗಿನ್ ಮೂಲಕ ನೋಂದಣಿ ಮಾಡಲು ಅವಕಾಶವಿದ್ದು, ನಿಗದಿತ ಸಮಯದಲ್ಲಿ ಪ್ರವೇಶ ಪತ್ರಗಳನ್ನು ಮಂಡಳಿಯು ಬಿಡುಗಡೆ ಮಾಡಲಿದೆ.

ಪರೀಕ್ಷೆಗಳು ಏಪ್ರಿಲ್ 30ರಿಂದ ಪ್ರಾರಂಭವಾಗಿ ಮೇ 13ರವರೆಗೆ ನಡೆಯಲಿವೆ. ಪ್ರಮುಖವಾಗಿ ಏ.30ಕ್ಕೆ ಕನ್ನಡ, ಮೇ 1ಕ್ಕೆ ರಸಾಯನಶಾಸ್ತ್ರ ಮತ್ತು ಲೆಕ್ಕಶಾಸ್ತ್ರ, ಮೇ 4ಕ್ಕೆ ಇಂಗ್ಲಿಷ್, ಮೇ 5ಕ್ಕೆ ಭೌತಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ, ಹಾಗೂ ಮೇ 6ಕ್ಕೆ ಜೀವಶಾಸ್ತ್ರ ಮತ್ತು ಅರ್ಥಶಾಸ್ತ್ರ ಪರೀಕ್ಷೆಗಳು ನಿಗದಿಯಾಗಿವೆ. ಇತಿಹಾಸ ಮತ್ತು ಗಣಿತ ಪರೀಕ್ಷೆಗಳು ಮೇ 7ರಂದು ನಡೆದರೆ, ಮೇ 8ಕ್ಕೆ ಗಣಕ ವಿಜ್ಞಾನ ಮತ್ತು ರಾಜ್ಯಶಾಸ್ತ್ರ ಪರೀಕ್ಷೆಗಳು ಜರುಗಲಿವೆ. ಕೊನೆಯ ದಿನವಾದ ಮೇ 13ರಂದು ಬೆಳಗ್ಗೆ ವಿವಿಧ ಭಾಷಾ ಪರೀಕ್ಷೆಗಳು ಹಾಗೂ ಮಧ್ಯಾಹ್ನದ ಅವಧಿಯಲ್ಲಿ ವೃತ್ತಿಪರ ವಿಷಯಗಳ (IT, Retail, Automobile ಇತ್ಯಾದಿ) ಪರೀಕ್ಷೆಗಳೊಂದಿಗೆ ಮಂಡಳಿಯು ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.