ಹರಿದ್ವಾರ: ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ರೀಲ್ಸ್ ಹುಚ್ಚು ಸಂಸಾರಗಳಿಗೆ ಕೊಳ್ಳಿ ಇಟ್ಟಿದೆ. ಅನೇಕ ಸಂಸಸಾರಗಳ ನಡುವೆ ಬಿರುಕು ಮೂಡಿ ದಂಪಿತಗಳ ನಡುವೆ ಕಲಹಕ್ಕೆ ನಾಂದಿ ಹಾಡಿದೆ. ಮಕ್ಕಳು ಅನಾಥವಾದ ಪ್ರಕರಣಗಳೂ ಉಂಟು. ಡೈವೋರ್ಸ್ ಗೂ ಕಾರಣವಾಗಿವೆ.
ಪತ್ನಿ ತನ್ನ ಮಾತು ಕೇಳದೆ ಸಂಸಾರದ ಕಡೆ ಗಮನ ಕೊಡದೆ ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುವುದರಲ್ಲೇ ಮಗ್ನಳಾಗಿದ್ದ ಪತ್ನಿಯ ವರ್ತನೆಯಿಂದ ಬೇಸತ್ತು ವ್ಯಕ್ತಿಯೊಬ್ಬ, ಆಕೆ ಬದುಕಿದ್ದಾಗಲೇ ಹರಿದ್ವಾರದಲ್ಲಿ ಆಕೆಗೆ ‘ಪಿಂಡದಾನ’ ಮಾಡಿರುವ ಪ್ರಕರಣ ವರದಿಯಾಗಿದೆ.
ಆತ ಪಿಂಡದಾನ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದ್ದು ಕುತೂಹಲ ಮೂಡಿಸಿದೆ.
ರೀಲ್ಸ್ ಸ್ಟಾರ್ ಆಗಿರುವ ಹೇಮಾ ಚೌಧರಿ ಎಂಬಾಕೆಯ ಪತಿ ಪಿಂಡ ಬಿಟ್ಟಿದ್ದಾನೆ. ಪತ್ನಿ ಹೇಮಾ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವುದು ಮತ್ತು ರೀಲ್ಸ್ ಮಾಡುವುದರಲ್ಲೇ ತೊಡಗಿಸಿಕೊಂಡಿರುತ್ತಿದ್ದಳು. ಈ ವಿಷಯಕ್ಕೆ ಸಂಬಂದಿಸಿದಂತೆ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. ರೀಲ್ಸ್ ಮಾಡುವುದನ್ನು ನಿಲ್ಲಿಸಿ ಸಂಸಾರದ ಕಡೆ ಗಮನ ಕೊಡುವಂತೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದರೂ ಆಕೆ ಕಿವಿಗೊಟ್ಟಿರಲಿಲ್ಲ.
ಹರಿದ್ವಾರಕ್ಕೆ ತೆರಳಿದ ಆತ, ಪಿಂಡದಾನ ವಿಧಿಗಳನ್ನು ತನ್ನ ಪತ್ನಿಯ ಹೆಸರಿನಲ್ಲಿ ನೆರವೇರಿಸಿದ್ದಾನೆ. ತಾನು ಮಾಡಿದ ಈ ಪಿಂಡದಾನದ ಪ್ರಕ್ರಿಯೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ನನ್ನ ಪತ್ನಿ ಈಗ ನನ್ನ ಪಾಲಿಗೆ ಸತ್ತಂತೆ ಎಂಬ ಸಂದೇಶವನ್ನು ರವಾನಿಸಲು ಈ ರೀತಿ ಮಾಡಿದ್ದಾನೆ ಎಂದು ವಿಶ್ಲೇಷಿಸಲಾಗುತ್ತಿದೆ.