2026-06-08 06:49:18

Real Star Upendra unveils the title of Country Made Part 2 | ರಿಯಲ್ ಸ್ಟಾರ್ ಉಪೇಂದ್ರರಿಂದ ಅರವಿಂದ್ ಕೌಶಿಕ್ ನಿರ್ದೇಶನದ ಕಂಟ್ರಿ ಮೇಡ್ ಭಾಗ 2 ಚಿತ್ರದ ಟೈಟಲ್ ಅನಾವರಣ | Speed News Kannada

Real Star Upendra unveils the title of Country Made Part 2 | ರಿಯಲ್ ಸ್ಟಾರ್ ಉಪೇಂದ್ರರಿಂದ ಅರವಿಂದ್ ಕೌಶಿಕ್ ನಿರ್ದೇಶನದ  ಕಂಟ್ರಿ ಮೇಡ್ ಭಾಗ 2 ಚಿತ್ರದ ಟೈಟಲ್ ಅನಾವರಣ | Speed News Kannada

ಕಂಟ್ರಿ ಮೇಡ್ ಭಾಗ ೨.  ನಮ್ಮೂರಲ್ಲಿ ನೊಣಗಳು ಜಾಸ್ತಿ ಯಾಕೆ ಅಂದ್ರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ'' ಎನ್ನುತ್ತಲೇ ಅರವಿಂದ್ ಕೌಶಿಕ್ ಒಂದು ಕಂಟ್ರಿ ಮೇಡ್ ಕಥೆ ಹೇಳಲು ಹೊರಟಿದ್ದಾರೆ. ಸಿನೆಮಾ ಮಾಡಲು ಸಿಕ್ಕಾಪಟ್ಟೆ ದೊಡ್ಡ  ಬಡ್ಜೆಟ್ , ದೊಡ್ಡ ತಾರಾಗಣ , ಇವೆಲ್ಲದರ  ಹೊರತಾಗಿಯೂ ಒಂದೊಳ್ಳೆ ಕಥೆ , ತಾಜಾ ನಿರೂಪಣೆಯ ಶೈಲಿ, ಜನರ ಮನಸಲ್ಲಿ ಉಳಿಯುವಂಥ ಪಾತ್ರಗಳು .., .ಹೀಗೆ  ಎಲ್ಲವನ್ನೂ ಒಟ್ಟಿಗೂಡಿಸಿಕೊಂಡು ಒಂದು ಉತ್ಸಾಹಿ ತಂಡದೊಂದಿಗೆ , ಬಹಳ ವರ್ಷಗಳ ಕಾಲ ಸಿನೆಮಾ ಸಂಭಾಷಣೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಆಶಯದೊಂದಿಗೆ ಮಾಡಿರುವ ಸಿನೆಮಾ ಕಂಟ್ರಿ ಮೇಡ್.  
ಇದೊಂದು ದೈವದ ದೈತ್ಯರ ಒಪ್ಪಂದಗಳ ಕಥೆ ಎನ್ನುತ್ತಲೇ ಕುತೂಹಲ ಮೂಡಿಸಿದ್ದಾರೆ. ಮನುಷ್ಯ ಮನಸ್ಸುಗಳಲ್ಲಿನ ರಾಕ್ಷಸ ಪ್ರವೃತ್ತಿಯನ್ನ ಪರೀಕ್ಷಿಸುತ್ತಾ ...ಪೆಂಡಾಲ್ಪುರ ಎನ್ನುವ ಊರನ್ನ ಕಟ್ಟಿ ಅಲ್ಲಿ ಒಂದಿಷ್ಟು  ಪಾತ್ರಗಳನ್ನು ಸೃಷ್ಟಿಸಿ ...ಒಂದು ತಲ್ಲಣದ ,ಹಿಂಸೆಯ , ಭಾವನೆಗಳ ಚಿತ್ರಣವನ್ನು ಕಂಟ್ರಿ ಮೇಡ್ ಮುಖೇನ ತೆರೆಗೆ ತರುತ್ತಿದ್ದಾರೆ. 

ಹುಲಿರಾಯ ಮತ್ತು ಅರ್ಧಂಬರ್ಧ ಪ್ರೇಮಕಥೆ ಚಿತ್ರಗಳ ಛಾಯಾಗ್ರಾಹಕ ಸೂರ್ಯ ರವರ ಕೆಲಸ, ಅರ್ಜುನ್ ರಾಮು ರವರ ಸಂಗೀತ ಸಂಯೋಜನೆ, ಜೊತೆಗೆ 
ಉಮೇಶ್ ಮಠಪತಿ, ಸೂರ್ಯ ,ಅರವಿಂದ್ ಕೌಶಿಕ್ ಹಾಗೂ ಚಂದನ್ ಗೌಡ ರವರ ನಿರ್ಮಾಣ ಚಿತ್ರಕ್ಕೆ ಇದೆ.
ಸತೀಶ್ ಬ್ರಹ್ಮಾವರ ರ ನಿರ್ಮಾಣ ನಿರ್ವಹಣೆ ಚಿತ್ರಕ್ಕೆ ಇದೆ.  ಸಂತೋಷ್ ರಾಧಾಕೃಷ್ಣನ್ ರವರು ಚಿತ್ರಕ್ಕೆ ವಿ ಎಫ್ ಎಕ್ಸ್ ಹಾಗು ಪೋಸ್ಟರ್ ಗಳನ್ನ ಸಂಯೋಜಿಸಿದ್ದಾರೆ.

ಸಿನೆಮಾ ಸಧ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು 
ರಿಯಲ್ ಸ್ಟಾರ್ ಉಪೇಂದ್ರ ರವರು ಚಿತ್ರದ ಶೀರ್ಷಿಕೆಯನ್ನ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರದಲ್ಲಿ ಅಭಿಲಾಷ್ ದ್ವಾರಕೀಶ್, ರಾಘವ ರಾಮ್, ಪ್ರದೀಪ್ ರೋಷನ್,  ಕುಲದೀಪಕ, ಗೌರವ್ ಆರ್ಯನ್ , ಕುಲದೀಪ್, ಸುಜಿತ್ ಶೆಟ್ಟಿ, ಅಶ್ವಿತ ಗೌಡ, ಅಪೂರ್ವ ಶ್ರೀ, ಸುಧಾ ಪ್ರಸನ್ನ,ರೇಣುಕಾ ಮುಂತಾದವರು ನಟಿಸಿದ್ದಾರೆ.
ಇನ್ನೊಂದಷ್ಟು ವಿಚಾರಗಳನ್ನ ಸದ್ಯದಲ್ಲೇ ಹಂಚಿಕೊಳ್ಳಲಿದ್ದು ,ಸದ್ಯಕಗಕೆ ರಿಯಲ್ ಸ್ಟಾರ್ ಉಪೇಂದ್ರ ರವರಿಂದ ಟೈಟಲ್ ಅನಾವರಣ ಮಾಡಿಸಿದ್ದಾರೆ. 

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.