2026-07-23 12:17:34

RCB to play last match at home ground | ಹೋಂ ಗ್ರೌಂಡ್‌ನಲ್ಲಿ ಕೊನೆ ಪಂದ್ಯ ಆಡಲಿರುವ RCB | Speed news kannada

RCB to play last match at home ground | ಹೋಂ ಗ್ರೌಂಡ್‌ನಲ್ಲಿ ಕೊನೆ ಪಂದ್ಯ ಆಡಲಿರುವ RCB | Speed news kannada

ಐಪಿಎಲ್‌ ಪ್ರಿಮಿಯರ್‌ ಲೀಗ್‌ನ 34 ಪಂದ್ಯದಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಟೈಟಾನ್ಸ್‌ ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಹೀಗಾಗಿ ಈ ಪಂದ್ಯ ಆರ್​​ಸಿಬಿ ಅಭಿಮಾನಿಗಳಿಗೆ ಬಹಳಷ್ಟು ವಿಶೇಷವಾಗಿದೆ. ವಾಸ್ತವವಾಗಿ ಆರ್​ಸಿಬಿ ಈ ಆವೃತ್ತಿಯಲ್ಲಿ ಎರಡು ತವರು ಮೈದಾನಗಳನ್ನು ಆಯ್ಕೆ ಮಾಡಿಕೊಂಡಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ 3 ನೇ ಸ್ಥಾನದಲ್ಲಿರುವ ಆರ್‌ಸಿಬಿ ಇಂದು ಗುಜರಾತ್‌ ತಂಡವನ್ನು ಸೋಲಿಸಿದರೆ ಎರಡನೇ ಸ್ಥಾನಕ್ಕೆ ಲಗ್ಗೆ ಇಡಲಿದೆ.. ಮೊದಲ ಬಾರಿಗೆ ಗುಜರಾತ್‌ ತಂಡವನ್ನು ಆರ್‌ಸಿಬಿ ಎದುರಿಸಲಿದ್ದು, ಗುಜರಾತ್‌ ವಿರುದ್ಧ ಗೆಲ್ಲಲು ಆರ್‌ಸಿಬಿ ಬಾಯ್ಸ್‌ ಕಸರತ್ತು ನಡೆಸುತ್ತಿದ್ದಾರೆ. ತವರು ಮೈದಾನದಲ್ಲಿ ಕೊನೆಯ ಪಂದ್ಯವನ್ನು ವೀಕ್ಷಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಚಿನ್ನಸ್ವಾಮಿಬಳಿ ಜನರು ಮುಗಿಬಿದ್ದಿದ್ದಾರೆ. ತವರುಮನೆಯಲ್ಲಿ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಜಯವನ್ನು ಸಾಧಿಸುತ್ತದೆಯ  ಎಂಬುದನ್ನು ಕಾದು ನೋಡಬೇಕಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.