2026-04-23 10:59:20

RCB Dandiga is a dream come true for bowlers | ಬೌಲರ್‌ಗಳ ಪಾಲಿನ ಸಿಂಹಸ್ವಪ್ನವಾದ RCB ದಾಂಡಿಗ | Speed news kannada

RCB Dandiga is a dream come true for bowlers | ಬೌಲರ್‌ಗಳ ಪಾಲಿನ ಸಿಂಹಸ್ವಪ್ನವಾದ RCB ದಾಂಡಿಗ | Speed news kannada

ಐಪಿಎಲ್ ಅಂಗಳದಲ್ಲಿ ರನ್ ಮಳೆ ಸುರಿಸುವವರು ಹಲವರಿದ್ದಾರೆ. ಆದರೆ ಎದುರಾಳಿ ಬೌಲರ್‌ಗಳ ಆತ್ಮವಿಶ್ವಾಸವನ್ನೇ ಕುಗ್ಗಿಸುವವರು ಕೆಲವರು ಮಾತ್ರ ಇದ್ದಾರೆ. ಇಂಡಿಯನ್‌ ಪ್ರಿಮೀಯರ್‌ ಲೀಗ್‌ನ 19ನೇ ಆವೃತ್ತಿಯಲ್ಲಿ  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸುವಂತಹ ಬ್ಯಾಟಿಂಗ್‌ ವ್ಯವಸ್ಥೆ ಆರ್‌ಸಿಬಿಯಲ್ಲಿ ಇದ್ದು, ತನ್ನದೇ ಆದ ಸ್ಪೋಟಕ ಬ್ಯಾಟಿಂಗ್‌ ಮೂಲಕ ಬೌಲರ್‌ಗಳ ನಿದ್ದೆಗೆಡಿಸಿದ್ದು ಮತ್ಯಾರು ಅಲ್ಲ ಅದೇ ರಜತ್‌ ಪಟಿದಾರ್‌. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್​ಗೆ ಮಾರುಹೋಗಿದ್ದಾರೆ. ಅಲ್ಲದೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ.  ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿರುವ ಪಟಿದಾರ್‌. ಅವರ ಆಕ್ರಮಣಕಾರಿ ಆಟ ಆರ್‌ಸಿಬಿ ತಂಡದ ರನ್ ಗತಿಯನ್ನೇ ಬದಲಿಸುತ್ತಿದೆ,” ಎಂದು ಇರ್ಫಾನ್‌ ಪಠಾಣ್‌ ಅಭಿಪ್ರಾಯಪಟ್ಟಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.