2026-07-23 06:16:41

RBI cancels Paytm Payments Bank license for violating rules | ನಿಯಮ ಉಲ್ಲಂಘನೆ ಮಾಡಿದ ಪೇಟಿಯಂ ಪೇಮೆಂಟ್ಸ್‌ ಬ್ಯಾಂಕ್‌, ಲೈಸೆನ್ಸ್‌ ರದ್ದುಗೊಳಿಸಿದ ಆರ್‌ಬಿಐ | Speed news kannada

RBI cancels Paytm Payments Bank license for violating rules | ನಿಯಮ ಉಲ್ಲಂಘನೆ ಮಾಡಿದ ಪೇಟಿಯಂ ಪೇಮೆಂಟ್ಸ್‌ ಬ್ಯಾಂಕ್‌, ಲೈಸೆನ್ಸ್‌ ರದ್ದುಗೊಳಿಸಿದ ಆರ್‌ಬಿಐ | Speed news kannada

ನಿಯಮಗಳನ್ನು ನಿರಂತರ ಉಲ್ಲಂಘನೆ ಮಾಡಿದ್ದಕ್ಕೆ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು (Licence) ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ. ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿದ್ದು, ಇದು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಬ್ಯಾಂಕ್ ಪದೇ ಪದೇ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಆರ್‌ಬಿಐ ಬ್ಯಾಂಕಿನ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣಕಾಸು ವಹಿವಾಟು ಮತ್ತು ಅದಕ್ಕೆ ಸಂಬಂಧಿಸಿದ ಲೋಪಗಳ ಬಗ್ಗೆ ಆರ್‌ಬಿಐ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ಗ್ರಾಹಕರ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದವು. ಉದಾಹರಣೆಗೆ ಒಂದು ಪ್ಯಾನ್ ಕಾರ್ಡ್ ಅನ್ನು ಸಾವಿರಾರು ಖಾತೆಗಳಿಗೆ ಲಿಂಕ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದು ಹಣದ ಮೂಲವನ್ನು ಪತ್ತೆ ಹಚ್ಚಲು ಕಷ್ಟವಾಗುವಂತೆ ಮಾಡಿತ್ತು. ಲಕ್ಷಾಂತರ ಖಾತೆಗಳಲ್ಲಿ ಸರಿಯಾದ ಗ್ರಾಹಕರ ಮಾಹಿತಿ ಇರಲಿಲ್ಲ. ಬಹಳ ಮುಖ್ಯವಾಗಿ ಪೇಮೆಂಟ್ ಬ್ಯಾಂಕ್‌ಗಳಿಗೆ ನಿಗದಿಪಡಿಸಿದ ವಹಿವಾಟಿನ ಮಿತಿಯನ್ನು ಮೀರಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತಿದ್ದುದ್ದು ಆರ್‌ಬಿಐನ ಸಂಶಯಕ್ಕೆ ಕಾರಣವಾಗಿತ್ತು

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.