2026-06-08 01:25:31

Rashmika Vijay romance in Raanbali | ರಣಬಾಲಿ ಯಲ್ಲಿ ರಶ್ಮಿಕಾ ವಿಜಯ್ ರೋಮ್ಯಾನ್ಸ್ ಹೊಸ ಜೋಡಿಗೆ ಏನಯ್ಯ ಸ್ವಾಮಿ ಗಿಫ್ಟ್ | Speed News Kannada

Rashmika Vijay romance in Raanbali | ರಣಬಾಲಿ ಯಲ್ಲಿ ರಶ್ಮಿಕಾ ವಿಜಯ್ ರೋಮ್ಯಾನ್ಸ್ ಹೊಸ ಜೋಡಿಗೆ  ಏನಯ್ಯ ಸ್ವಾಮಿ ಗಿಫ್ಟ್ | Speed News Kannada

ಮದುವೆ ಬಳಿಕ ರಶ್ಮಿಕಾ-ವಿಜಯ್ ಚಿತ್ರದ ಮೊದಲ ಹಾಡು ರಿಲೀಸ್..ತೆರೆಮೇಲೆ ಸತಿ-ಪತಿಯಾದ ನವ ಜೋಡಿ

ಹೊಸ ಬಾಳಿಗೆ ಕಾಲಿಟ್ಟಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಜೋಡಿಯ ಹೊಸ ಚಿತ್ರ ರಣಬಾಲಿಯ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಏನಯ್ಯ ಸ್ವಾಮಿ ಗೀತೆಯಲ್ಲಿ ವಿಜಯ್ ರಶ್ಮಿಕಾ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ. ಈ ಜೋಡಿಯ 
ಆನ್ ಸ್ಕ್ರೀನ್ ರೋಮ್ಯಾನ್ಸ್ ಸಖತ್ ಆಗಿದೆ.

ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ರಣಬಾಲಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ರಶ್ಮಿಕಾ ಜಯಮ್ಮ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ ಮತ್ತು ಟಿ-ಸಿರೀಸ್ ಪ್ರಸ್ತುತಪಡಿಸಿದೆ. ಚಿತ್ರವು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಕಥೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ.

ರಾಹುಲ್ ಸಾಂಕೃತ್ಯಾಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.  ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶ್ವೇತಾ ಮೋಹನ್ ಮತ್ತು ಕಾರ್ತಿಕ್ ಈ ಗೀತೆಯನ್ನ ಹಾಡಿದ್ದಾರೆ. ಕನ್ನಡದಲ್ಲಿಯೂ ಹಾಡು ಬಿಡುಗಡೆ ಮಾಡಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.