ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೊಮ್ಮೆ ಇಡೀ ದೇಶದ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹದ ನಂತರ ಅವರ ಪ್ರೇಮ ಪ್ರಯಾಣದ ಬಗ್ಗೆ ಅನೇಕ ಗಮನ ಸೆಳೆಯುವ ರೋಚಕ ಕಥೆಗಳು ಹೊರಬರುತ್ತಿವೆ. ಈ ಜೋಡಿಯ ಬಗ್ಗೆ ಮತ್ತೊಂದು ಬಿಗ್ ಸೀಕ್ರೆಟ್ ಇದೀಗ ರಿವೀಲ್ ಆಗಿದೆ.
ವಿಜಯ್‌ಗೆ ಮೊದಲು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ರಶ್ಮಿಕಾ ಎಂಬ ಸತ್ಯ ಇದೀಗ ರಿವೀಲ್ ಆಗಿದೆ. ಹಾಗೆಯೇ ಬಹಳ ಸಮಯದಿಂದ ಅಭಿಮಾನಿಗಳು ಈ ಜೋಡಿಯನ್ನು ಪ್ರೀತಿಯಿಂದ "ರೌಡಿ" ಮತ್ತು "ನ್ಯಾಷನಲ್ ಕ್ರಶ್" ಎಂದು ಕರೆಯುತ್ತಿದ್ದರು. ಜೊತೆಗೆ ಈ ಇಬ್ಬರ ಕೆಮಿಸ್ಟ್ರಿ ಸಿನಿಮಾಗಳ ಚಿತ್ರೀಕರಣ ಸಮಯದಲ್ಲಿ ಪ್ರಾರಂಭವಾಯಿತು.
ನಂತರ ಇಬ್ಬರು ಒಳ್ಳೆಯ ಸ್ನೇಹಿತರಾದರು ಆ ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿತು. ಜೊತೆಗೆ ಆ ಸಮಯದಲ್ಲಿ ರಶ್ಮಿಕಾ ತನ್ನ ಭಾವನೆಗಳ ಬಗ್ಗೆ ಸ್ಪಷ್ಟಪಡಿಸಲು ಮತ್ತು ಅವುಗಳನ್ನು ತನ್ನೊಳಗೆ ಬಚ್ಚಿಡದೆ ಇರಲು ನಿರ್ಧರಿಸಿದರು. ಹೀಗಾಗಿ ಮೊದಲು ತನ್ನ ಭಾವನೆಗಳನ್ನು ಹಂಚಿಕೊಂಡದ್ದು ರಶ್ಮಿಕಾ ಎಂದು ಹೇಳಲಾಗುತ್ತಿದೆ. ಜೊತೆಗೆ ವಿಜಯ್ ಕೂಡಾ ರಶ್ಮಿಕಾ ಪ್ರೀತಿಯನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಫ್ಯಾನ್ಸ್ ಗಳ ಭೇಟಿ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು ಈ ಪ್ರಶ್ನೆಯನ್ನು ಕೇಳಿದರು. ತನಗೆ ಮೊದಲು ಪ್ರಪೋಸ್ ಮಾಡಿದ್ದು ರಶ್ಮಿಕಾ ಎಂಬ ಬಿಗ್ ಸೀಕ್ರೆಟ್ ಅನ್ನು ವಿಜಯ ರಿವೀಲ್ ಮಾಡಿದ್ದಾರೆ.