2026-06-08 01:26:03

Rashmika Mandanna and Vijay Deverakonda get married | ದಾಂಪತ್ಯಕ್ಕೆ ಕಾಲಿರಿಸಿದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ | Speed News Kannada

Rashmika Mandanna and Vijay Deverakonda get married | ದಾಂಪತ್ಯಕ್ಕೆ ಕಾಲಿರಿಸಿದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ | Speed News Kannada

ಉದಯಪುರ: ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವಿವಾಹ ರಾಜಸ್ಥಾನದ ಉದಯಪುರದ ಐಶಾರಾಮಿ ರೆಸಾರ್ಟ್ನಲ್ಲಿ ವೈಭವೋಪೇತವಾಗಿ ನೆರವೇರಿದೆ. ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ತೆಲುಗು ಸಂಪ್ರದಾಯದಂತೆ ವಿವಾಹ ನೆರವೇರಿದೆ ಎಂದು ತಿಳಿದು ಬಂದಿದೆ.
ಎರಡೂ ಕುಟುಂಬದ ಸದಸ್ಯರು, ಹಿರಿಯರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆದರೆ ಮದುವೆಯ ಅಧಿಕೃತ ಫೋಟೊವನ್ನು ಇನ್ನೂ ಬಿಡುಗಡೆ ಮಾಡಿಲ್ಲ. 
ಕಳೆದ ಕೆಲ ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಯಾವಾಗ ಮದುವೆಯಾಗಬಹುದು ಎಂಬ ಕುತೂಹಲ ಇದ್ದೇ ಇತ್ತು. 2025ರ  ಅಕ್ಟೋಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 
ಉದಯಪುರದಲ್ಲಿ ನಾಲ್ಕೈದು ದಿನಗಳಿಂದ  ಮದುವೆ ಕಾರ್ಯಗಳು ನಡೆಯುತ್ತಲೇ ಇದ್ದವು. ನಿನ್ನೆ ಹಳದಿ ಮತ್ತು ಸಂಗೀತ್ ಕಾರ್ಯಕ್ರಮ ನಡೆದಿತ್ತು. ಅದಕ್ಕೂ ಮುನ್ನ ಬಳೆ ಶಾಸ್ತ್ರ ಆಯೋಜಿಸಲಾಗಿತ್ತು. ತೆಲಂಗಾಣದಿಂದ ಆಗಮಿಸಿದ ಪುರೋಹಿತರ ತಂಡ ಇವರ ಮದುವೆಯನ್ನು ನಡೆಸಿಕೊಟ್ಟಿದೆ.  
ಇವತ್ತು ಸಂಜೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಮತ್ತೊಮ್ಮೆ ನೆರವೇರಲಿದೆ. ಎರಡೂ ಕುಟುಂಬಗಳ ಸಂಪ್ರದಾಯ, ಆಚರಣೆಗೆಗಳಿ ಚ್ಯುತಿ ಬಾರದಂತೆ ವಿವಾಹ ನಡೆಯುತ್ತಿರುವುದು ಮತ್ತೊಂದು ವಿಶೇಷ. 
ಮಾರ್ಚ್ 4 ರಂದು ಹೈದರಾಬಾದ್ನ ತಾಜ್ ಕೃಷ್ಣ ಹೋಟೆಲ್‌ ನಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಎಲ್ಲ ಭಾಷೆಗಳ ಚಿತ್ರರಂಗದ ತಾರೆಯರು, ಆಂಧ್ರ, ತೆಲಂಗಾಣ ರಾಜ್ಯಗಳ ರಾಜಕೀಯ ಮುಖಂಡರುಗಳು ಹಾಗೂ ಕೆಲವು ಕೇಂದ್ರ ಸಚಿವರು, ಸಂಸದರು ಸಹ ಭಾಗವಹಿಸಲಿದ್ದಾರೆ. ಹನಿಮೂನ್‌ ಮುಗಿದ ನಂತರ ಕೊಡಗಿನಲ್ಲಿ ಮತ್ತೊಂದು ವಿವಾಹ ಆರತಕ್ಷತೆ ನಡೆಯಲಿದೆ ಎಂದು ರಶ್ಮಿಕಾ ಕುಟುಂಬದ ಮೂಲಗಳು ತಿಳಿಸಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.