2026-04-23 09:17:13

Ranveer Singhs ghost avatar | ರಣವೀ‌ರ್ ಸಿಂಗ್ ಭೂತದ ಅವತಾರ ತೆರೆ ಹಿಂದಿನ ವಿಡಿಯೊ ನೋಡಿ ದಂಗಾದ ಅಭಿಮಾನಿಗಳು | Speed News Kannada

Ranveer Singhs ghost avatar | ರಣವೀ‌ರ್ ಸಿಂಗ್ ಭೂತದ ಅವತಾರ ತೆರೆ ಹಿಂದಿನ ವಿಡಿಯೊ ನೋಡಿ ದಂಗಾದ ಅಭಿಮಾನಿಗಳು | Speed News Kannada

ಆದಿತ್ಯ ಧಾರ್ ನಿರ್ದೇಶನದ, ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ₹450 ಕೋಟಿ ಗಳಿಸಿ, ಹಲವು ದಾಖಲೆಗಳನ್ನು ಮುರಿದಿದೆ. ಹಮ್ಮಾ ಮತ್ತು ಸಿಂಗ್ ರಂಗಿ ಎಂಬ ಎರಡು ಪಾತ್ರಗಳಲ್ಲಿ ರಣವೀರ್ ಸಿಂಗ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ನಟ ರಣವೀರ್ ಸಿಂಗ್ ಅವರ ತೆರೆ ಹಿಂದಿನ ಮೇಕಪ್ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸೆಲೆಬ್ರಿಟಿ ಮೇಕಪ್ ಕಲಾವಿದೆಯಾದ ಪ್ರೀತಿಶೀಲ್ ಸಿಂಗ್ ಅವರು ಇನ್ ಸ್ಟಾಗ್ರಾಂನಲ್ಲಿ ರಣವೀರ್ ಅವರಿಗೆ ಮೇಕಪ್ ಮಾಡುತ್ತಿರುವ ತುಣುಕನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ರಣವೀರ್ ಸಿಂಗ್ ಅವರ ಮುಖವನ್ನು ಸಂಪೂರ್ಣವಾಗಿ ಭೂತದ ರೀತಿಯಲ್ಲಿ ಮೇಕಪ್ ಮಾಡಿದ್ದಾರೆ. ಅದನ್ನು 'ನೆರಳುಗಳಿಂದ ಹುಟ್ಟಿದ ಭೂತ' ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ದಂಗಾಗಿದ್ದಾರೆ. ಅಲ್ಲದೇ ನಟನ ತಾಳ್ಮೆ ಹಾಗೂ ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.