2026-06-08 01:23:21

Ramayana teaser release | ರಾಮಾಯಣ ಟೀಸರ್‌ ರೀಲಿಸ್‌, ರಾವಣನ ಪಾತ್ರದಲ್ಲಿ ಮಿಂಚಿದ ರಾಕಿಂಗ್‌ ಸ್ಟಾರ್‌ | Speed news kannada

Ramayana teaser release | ರಾಮಾಯಣ ಟೀಸರ್‌ ರೀಲಿಸ್‌, ರಾವಣನ ಪಾತ್ರದಲ್ಲಿ ಮಿಂಚಿದ ರಾಕಿಂಗ್‌ ಸ್ಟಾರ್‌ | Speed news kannada

ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಮಾಯಣ ಭಾರತ ಚಿತ್ರದಂಡದ ಅತ್ಯಂತ ದೊಡ್ಡ ಬಜೆಟ್‌ ಸಿನಿಮಾವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ರಾಮಾಯಣ ಸಿನಿಮಾ ಟೀಸರ್‌ನಲ್ಲಿ ರಾಮ ಹಾಗೂ ರಾವಣನ ಪಾತ್ರವೂ ಪ್ರಮುಖವಾಗಿದ್ದು, ಶ್ರೀರಾಮನ ಪಾತ್ರವನ್ನು ರಣ್‌ಬೀರ್‌ ಕಪೂರ್‌ ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ, ಇನ್ನೂ ರಾಮಾಯಣದ ಹಿಂದಿ ಸಿನಿಮಾದಲ್ಲಿ ಕನ್ನಡದ ರಾಕಿಂಗ್‌ ಸ್ಟಾರ್‌ ಮಿಂಚಿದ್ದಾರೆ. ರಾವಣನ ಹೊಸ ಪಾತ್ರದಲ್ಲಿ ಯಶ್‌ ಕಾಣಿಸಿಕೊಂಡಿದ್ದು. ಟೀಸರ್‌ ಅಂತ್ಯದಲ್ಲಿ ಯಶ್‌ನ ಹೊಸ ಲುಕ್‌ನನ್ನು ರಿವೀಲ್‌ ಮಾಡಲಾಗಿದೆ. ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರವೇ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ. ಇನ್ನೂ ಅಭಿಮಾನಿಗಳು ಯಶ್‌ನ ಹೊಸ ಪಾತ್ರದಲ್ಲಿ ನೋಡಲು ಕಾತುರದಿಂದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.