2026-06-08 04:54:47

ರಾಮಲಿಂಗಾರೆಡ್ಡಿ ಪಕ್ಷಕ್ಕೆ ಹಾನಿ ಮಾಡಲ್ಲ; ಸಮಸ್ಯೆ ಬಗೆಹರಿಸುತ್ತೇವೆ; ಹರಿಪ್ರಸಾದ್‌ ವಿಶ್ವಾಸ|Speed News Kannada

ರಾಮಲಿಂಗಾರೆಡ್ಡಿ ಪಕ್ಷಕ್ಕೆ ಹಾನಿ ಮಾಡಲ್ಲ; ಸಮಸ್ಯೆ ಬಗೆಹರಿಸುತ್ತೇವೆ; ಹರಿಪ್ರಸಾದ್‌ ವಿಶ್ವಾಸ|Speed News Kannada

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್​ ಪಕ್ಷಕ್ಕೆ ತೊಂದರೆ ಹಾನಿ ಆಗುವಂತ ಕೆಲಸವನ್ನು ಅವರು ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕಾರಣದಲ್ಲಿ  ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯ. ಪರಿಸ್ಥಿತಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡುತ್ತೇವೆ. ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮತ್ತು ಅನುಭವಿ ನಾಯಕರು. ಅವರು ಐದು ದಶಕಗಳಿಂದ ಪಕ್ಷದ ಜತೆ ಇದ್ದಾರೆ. ಹಲವಾರು ಜವಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಹಜವಾಗಿ ಕೆಲವೊಮ್ಮೆ ಅಭಿಪ್ರಾಯ ಭೇದಗಳು ಉಂಟಾಗಬಹುದು. ಅದನ್ನು ದೊಡ್ಡ ಆತಂಕ ಎಂದು ಪರಿಗಣಿಸಬೇಕಾಗಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.

ರಾಮಲಿಂಗಾರೆಡ್ಡಿ ಅವರ ಜೊತೆ ನಾನೂ ಮಾತನಾಡುವೆ, ತೊಂದರೆ ಏನೂ ಇಲ್ಲ. ಕೆಲವು ಸಂದರ್ಭಗಳಲ್ಲಿ ರಾಜಕಾರಣದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ. ಅದು ಸಹಜ. ಕಾಂಗ್ರೆಸ್ಸಿಗೆ ತೊಂದರೆ ಆಗುವಂತ ಕೆಲಸ ಅವರು ಮಾಡುವುದಿಲ್ಲ ಎಂದಿದ್ದಾರೆ.

ರಾಜಕಾರಣದಲ್ಲಿ ಅಭಿಪ್ರಾಯ ಭಿನ್ನಾಭಿಪ್ರಾಯ, ಅಸಮಾಧಾನ ಎಲ್ಲವೂ ಸಾಮಾನ್ಯ. ಅವುಗಳನ್ನು ಸಮಾಲೋಚನೆಯ ಮೂಲಕ ಬಗೆಹರಿಸುವುದು ಪಕ್ಷದ ಸಂಸ್ಕೃತಿ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.