2026-04-27 07:23:46

Raghav Chadha joins BJP, netizens outraged, Chadha wife trolled|ರಾಘವ್ ಚಡ್ಡಾ ಬಿಜೆಪಿಗೆ, ನೆಟ್ಟಿಗರ ಆಕ್ರೋಶ, ಚಡ್ಡಾ ಪತ್ನಿ ಟ್ರೋಲ್|Speed News Kannada

Raghav Chadha joins BJP, netizens outraged, Chadha wife trolled|ರಾಘವ್ ಚಡ್ಡಾ ಬಿಜೆಪಿಗೆ, ನೆಟ್ಟಿಗರ ಆಕ್ರೋಶ, ಚಡ್ಡಾ ಪತ್ನಿ ಟ್ರೋಲ್|Speed News Kannada

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ  ಸೇರ್ಪಡೆಯಾಗಿರುವುದು ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.ಬಿಜೆಪಿ ಸೇರಿದ ಕೇವಲ 24 ಗಂಟೆಗಳ ಒಳಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ರಾಘವ್ ಚಡ್ಡಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.ಬಿಜೆಪಿ ವಿರುದ್ಧ ಈ ಹಿಂದೆ ರಾಘವ್ ಚಡ್ಡಾ ನೀಡಿದ್ದ ಹರಿತವಾದ ಟೀಕೆಗಳು, ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. "ಬಿಜೆಪಿ ಒಂದು ವಾಷಿಂಗ್ ಮಷಿನ್ ಪಾರ್ಟಿ" ಎಂದು ಹಿಂದೆ ಹೇಳಿದ್ದ ಅವರ ಮಾತನ್ನೇ ನೆಟ್ಟಿಗರು ಈಗ ಅವರಿಗೆ ನೆನಪಿಸುತ್ತಿದ್ದಾರೆ.

ರಾಘವ್ ಚಡ್ಡಾ ಅವರೊಂದಿಗೆ ಅವರ ಪತ್ನಿ, ನಟಿ ಪರಿಣೀತಿ ಚೋಪ್ರಾ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. "ರಾಜಕಾರಣಿಯನ್ನು ಮದುವೆ ಆಗಲ್ಲ" ಎಂದು ಈ ಹಿಂದೆ ಪರಿಣೀತಿ ಹೇಳಿದ್ದ ಹಳೆಯ ವಿಡಿಯೋವನ್ನೇ ಮುಂದಿಟ್ಟುಕೊಂಡು, ದಂಪತಿಗಳಿಬ್ಬರನ್ನೂ ಜನರು ಕಟುವಾಗಿ ಟ್ರೋಲ್ ಮಾಡುತ್ತಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ನೆಗೆಟಿವ್ ಕಮೆಂಟ್‌ಗಳ ಸುರಿಮಳೆಯೇ ಹರಿದು ಬರುತ್ತಿದೆ.ರಾಘವ್ ಚಡ್ಡಾ ಅವರನ್ನು ವ್ಯಂಗ್ಯವಾಡುವ ವಿವಿಧ ರೀತಿಯ ಮೀಮ್‌ಗಳು, ಎಡಿಟ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ರಾಜಕೀಯ ನಿಲುವು ಬದಲಿಸಿದ ಕಾರಣಕ್ಕಾಗಿ ರಾಘವ್ ಚಡ್ಡಾ ಅವರು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶವನ್ನು ಎದುರಿಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.